"ನನ್ನ ಹೃದಯದಲುದಿಸಿದ ಕವಿತೆ ನಿನ್ನ ನೆನಪಲೆ ಹಾಡಿದೆ ಚರಿತೆ" ಗರಿಗೆದರುತ ಕುಣಿದಾ ನವಿಲು ಮಳೆ ಹನಿಸಿತು ಕರಗಿಸಿ ಮುಗಿಲು ಗಿರಿ ಕಾನನ ತಬ್ಬಿದ ಹಸಿರು ನಮ್ಮ ಪ್ರೀತಿಗೆ ತಂದಿತು ಉಸಿರು ಎಲ್ಲಾ ನದಿ ಝರಿ...
ನಿಶ್ಯಬ್ಧದ ಅಂತರಾಳದಲ್ಲಿ ನೆನಪಾಗುತ್ತವೆ ರಾತ್ರಿಯ ಏಕಾಂತದಲ್ಲಿ ಪಿಸುಗುಡುತ್ತವೆ. ಒಂಟಿತನದ ಬಯಕೆಯಲ್ಲಿ ಲಾಗ ಹಾಕುತ್ತವೆ. ಬಿದ್ದ ಬಾವಿಯಿಂದ ಮೇಲೆತ್ತಿ ತರಲು ನೀ ಎಸೆದ ಹಗ್ಗದ ಗುರುತು, ಹಿಡಿದೆತ್ತಿದ ಗುರುತು ಹಗ್ಗ ಎಸೆಯದೇ ನೀನು ಸುಮ್ಮನಿರಬಹುದಿತ್ತು ಉಳಿದವರಂತೆ...
ನಸುಕಿನಲ್ಲಿ ಹಲ್ಲು ಮೂಡದ ಹಸುಳೆಯನ್ನು ಅವರು ಹೊಸಕಿ ಹಾಕಿದರು ಹಾಡು ಹಗಲೇ ಹರೆಯದ ಹುಡುಗಿಯನ್ನು ಎಳೆದಾಡಿದರು ಮುಸ್ಸಂಜೆಯಲ್ಲಿ ಮನೆಗೆ ಮರಳುತ್ತಿದ್ದ ಮುದುಕನನ್ನು ಮುಗಿಸಿದರು. ಬಲಿಯಾದವರು-ಬಲಿಗೈದವರು ಇಬ್ಬರೂ ನನ್ನ ಒಡಹುಟ್ಟುಗಳು ಅಯ್ಯೋ, ದ್ವೇಷವೊಂದೇ ಉಸಿರಾಡುತ್ತಿದೆ ರಾತ್ರಿ-ಹಗಲು......
ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ...
ಕಣ್ಣಲ್ಲಿ ನೀರು ತುಂಬಿ ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು ನಗುನಗುತ್ತಾ ಅಳುತ್ತೇವೆ. ಅಳು ಮುಚ್ಚಿ ನೋವು ಮರೆಸಿ ನಗುನಗುತ್ತಾ ಬೆರೆಯುತ್ತೇವೆ. ಹೊರಜಗತ್ತಿಗೆ ಸದಾ ಸುಖಿಗಳು ನಾವು ನಗುನಗುತ್ತಲೇ ಇರುವ ಅದೃಷ್ಟಶಾಲಿಗಳು! ಗೃಹಲಕ್ಷ್ಮಿಗಳು. ದೂರದ ಬೆಟ್ಟ...
ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ ಚಿತ್ತವಳಿಪನು ನನಗೆ ತಳೆಯದಿರಲಿ ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ ದೃಷ್ಟಿ ತಾಕಿದರಾನು ಬಾಡಿಯೇನು ಮುಟ್ಟಲೇತಕೆ...
ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು...