
ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ – ವಿಜ್ಞಾನೇಶ್ವ...
ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು ಕಾಡೊಳಗೆ ಮೆದ್ದು ಬರೆ ಹಸುವನು ಕೊಂಡಾಡುತಲಿದ್ದ ರೈತರಿಂದಾಧುನಿಕ ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು ಕಟ್ಟಿ ಸಾಕುವ ಹಸುಗಳಾಗಿಹರೋ – ವಿಜ್ಞಾನೇಶ್ವರಾ *****...
ಕಾಸಿಗವಕಾಶವಿಹುದೋ ಇಲ್ಲವೋ ಎಂದೆಂಬ ಬೂಸು ಚರ್ಚೆಯೊಳೇನು ದಿನ ಕಳೆವುದೋ ಕೃಷಿಯೊಳು ಸಾವಯವದುನ್ನತಿಯ ಬಗೆಗೆ ಲೇಸಲ್ಲವೆಂದಿಗಾದರು ಗಣಿಕೆ ಸಹವಾಸ ವಸುಧೆಯುರಿ ಏರುತಿದೆ ಏಡ್ಸ್ ಬಲು ಮೋಸ – ವಿಜ್ಞಾನೇಶ್ವರಾ *****...
ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು – ವಿಜ್ಞಾನೇಶ್ವರಾ *****...
ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು – ವಿಜ್ಞಾನೇಶ್ವರಾ *****...
ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು – ವಿಜ್ಞಾನೇಶ್ವರಾ *****...
ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ – ವಿಜ್ಞಾನೇಶ್ವರಾ *****...
ಉದ್ಯೋಗಗಳಿರಬಹುದು ನೂರೊಂದು ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು ಬದುಕಿದೊಡೆ ಬದುಕಿಸುವ ಕೃಷಿಯಹುದು ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ – ವಿಜ್ಞಾನೇಶ್ವರಾ *****...
ಆಡುವುದು, ಪಾಡುವುದು, ಏನೆಲ್ಲ ಮಾಡುವುದು ಬಡವನಾದೊಡಂ ಬಿಡದೆ ತಾ ಜಾಣನೆನಿಸಿಕೊಳು ವೊಡೆಲ್ಲರಿಗು ನೂರೊಂದವಸರಗಳವಕಾಶಗಳಿ ರ್ದೊಡಂ ಕೈ ಕೆಸರುಣದ ಗುಂಪನೇ ಬಡ ಬಡಿಸಿ ತಜ್ಞರೆನುವಜ್ಞತೆ ಯಾಕೋ ರೈತಂಗೆ – ವಿಜ್ಞಾನೇಶ್ವರಾ *****...
ಏನ ಪೇಳಲಿಯಮ್ಮನ್ನದಾತನ ಸಿದ್ಧಿಯನು? ದಾನ ಸುದ್ದಿಯನು! ತಾನೇನ ಬೆಳೆದರು ಘನನು ತಾನೆಲ್ಲವನು ಬಗೆಬಗೆಯ ಕಂಪೆನಿಗಿಕ್ಕಿ ಕೊನೆಯೊಳೆತ್ತುವ ನೋಡಾ ರಿಕ್ತ ಹಸ್ತವನು ಶೂನ್ಯ ಸಂಪಾದನೆಯಾಧ್ಯಾತ್ಮ ಪ್ರತಿನಿಧಿ ಇವನು – ವಿಜ್ಞಾನೇಶ್ವರಾ *****...














