ತಮಿಳುನಾಡಿನ ಪೆರಿಯಾಕುಲಮ್‌ನಲ್ಲಿ ಜನವರಿ 25 ಮತ್ತು 26, 2003ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರಗಿತು. ಆಲ್ಲಿ 46 ಜನರಿಗೆ ಕಣ್ಣಿನ ಕ್ಕಾಟರಾಕ್ಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು- ಅವರ ಕಣ್ಣಿನ ದೃಷ್ಟಿ ಸುಧಾರಿಸಲಿಕ್ಕಾಗಿ. ಆದರೆ ಆದದ್ದೇನು? ಅವರ ಕಣ್ಣುಗಳಿಗೆ ಸೋಂಕು ತಗಲಿ ಮರುದಿನವೇ ಕೀವು ತುಂಬಿಕೊಂಡಿತು. ಹೌಹಾರಿದ ಸಂಯೋಜಕರು ಆ ಬಡಪಾಯಿಗಳನ್ನು ಮಥುರೆಯ ಸರಕಾರಿ ರಾಜಾಜಿ ಆಸ್ಪತ್ರೆಗೆ ತರಾತುರಿಯಲ್ಲಿ ಒಯ್ದರು. ಅಲ್ಲಿ ಅವರ ಕಣ್ಣಿನ ದೃಷ್ಟಿ ಉಳಿಸಲಿಕ್ಕಾಗಿ ತುರ್ತು ಚಿಕಿತ್ಸೆ ನೀಡಲಾಯಿತು. ಈ ನಡುವೆ ತಮಿಳುನಾಡಿನ ವೈದ್ಕಕೀಯ ಶಿಕ್ಷಣ ನಿರ್ದೇಶಕರ ನೇತೃತ್ವದ ಉನ್ನತ ಮಟ್ಟದ ಸಮಿತಿಯೊಂದು ಆ ದುರಂತದ ಬಗ್ಗೆ ತನಿಖೆ ನಡೆಸುತ್ತಿದೆ.

ಕಣ್ಣಿಗೆ ಕಿಂಚಿತ್ ಸೋಂಕು ತಗಲಿದರೂ ಏನು ಆಪಾಯ ಆದೀತು ಎಂಬುದಕ್ಕೆ ಈ ಪ್ರಕರಣ ಇತ್ತೀಚೆಗಿನ ನಿದರ್ಶನ. ಕಣ್ಣಿಗೆ ತಗಲಿದ ಸೋಂಕು ಭಾಗಶಃ ಅಥವಾ ಪೂರ್ಣ ದೃಷ್ಟಿ ನಾಶಕ್ಕೆ ಕಾರಣವಾದೀತು. ಆದರೆ ಕಣ್ಣಿಗೆ ಹಾಕಿಕೊಂಡ ಔಷಧಿಯಿಂದಲೇ ದೃಷ್ಟಿ ನಾಶವಾದರೆ?

ಕಣ್ಣಿನ ಡ್ರಾಪ್ಸ್ ಸುರಕ್ಷಿತವೇ?
ಇಂಥ ಆಪಾಯ ಸಂಭವ ಲಕ್ಷದಲ್ಲಿ ಒಬ್ಬರಿಗೆ ಎಂದು ನೀವು ಆಸಡ್ಡೆ ಮಾಡಬಹುದು. ಆದರೆ ನಿಜಸ್ಥಿತಿ ತೀರಾ ಗಂಭೀರವಾಗಿದೆ. ಆಹಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ (ಸಿ.ಇ.ಆರ್. ) ಸೊಸ್ಕಟಿಯು ಕಣ್ಣಿನ ಸಲ್ಪಸೆಟಮೈಡ್ ಡ್ರಾಪ್‌ಗಳ ಐದು ಬ್ರಾಂಡ್ ಗಳ ಸ್ಯಾಂಪಲ್ ಗಳ ವೈಜ್ಞಾನಿಕ ಪರೀಕ್ಷೆ ನಡೆಸಿದಾಗ ಆವುಗಳಲ್ಲಿ ಒಂದು ಬ್ರಾಂಡ್‌ನ ಔಷಧಿ ಡ್ರಾಪ್ಸ್‌ಗಳು ಸೂಕ್ಷ್ಮ ಕ್ರಿಮಿರಹಿತ ಆಗಿರಲಿಲ್ಲ ಎಂಬುದು ಖಚಿತಪಟ್ಟದೆ.

ಆಲ್ಬುಸಿಡ್ (10%), ಆಲ್ಫಾಸಿಡ್ (30%), ಆಂಡ್ರೆಮೈಡ್ (20%), ಲೊಕುಲಾ (10%) ಮತ್ತು ಸಲ್ಪಸಿಡ್ (20%) ಎಂಬ ಐದು ಬ್ರಾಂಡ್‌ಗಳನ್ನು ಪರೀಕ್ಷಿಸಲಾಯಿತು. ಅವುಗಳ ಗುಣಮಟ್ಟ ಪರೀಕ್ಷೆಯನ್ನು ಮೂರು (ಭಾರತೀಯ, ಬ್ರಿಟಿಷ್ ಮತ್ತು ಯು.ಎಸ್.) ಫಾರ್ಮಕೋಪಿಯಾಗಳ ಮಾನದಂಡಗಳ ಪ್ರಕಾರ ನಡೆಸಲಾಯಿತು.

ಎಲ್ಲ ಔಷಧಿಗಳೂ ಸೂಕ್ಷ್ಮ ಕ್ರಿಮಿರಹಿತ ಆಗಿರಬೇಕು. ಕಣ್ಣುಗಳಿಗೆ ಹಾಕುವ ಔಷಧಿಗಳು ಮತ್ತು ನಮ್ಮ ದೇಹದ ರಕ್ತನಾಳಕ್ಕೆ ಚುಚ್ಚುವ ಔಷಧಿಗಳಂತೂ ಸೂಕ್ಷ್ಮ ಕ್ರಿಮಿರಹಿತ ಇದ್ದರೆ ಮಾತ್ರ ಅದು ಔಷಧಿಯಾಗಿ ಬಳಕೆಗೆ ಆರ್ಹ. ಯಾಕಂದರೆ ಅದರಲ್ಲಿರುವ ಸೂಕ್ಷ್ಮಕ್ರಿಮಿಯಿಂದಾಗಿ ರೋಗಿಯ ಕಣ್ಣುಗಳಿಗೆ ಸೊಂಕು ತಗಲೀತು! ಆ ಪರೀಕ್ಷೆಯಲ್ಲಿ ಆವು ಐದು ಬ್ರಾಂಡ್‌ಗಳ ಔಷಧಿ ಡ್ರಾಪ್ಸ್‌ಗಳು ಸೂಕ್ಷ್ಮ ಕ್ರಿಮಿರಹಿತವೇ ಎಂದು ಪರೀಕ್ಷಿಸಲಾಯಿತು. ಆವುಗಳಲ್ಲಿ ಸಲ್ಳಸಿಡ್ 20% ಹೆಸರಿನ ಕಣ್ಣಿನ ಔರ್ಷಧಿ ಡ್ರಾಪ್ಸ್‌ಮಾತ್ರ ಸೂಕ್ಷ್ಮಕ್ರಿಮಿರಹಿತ ಆಗಿರಲಿಲ್ಲ (ಅಂದು ಅದು ಔಷಧಿಯಾಗಿ ಬಳಕೆಗೆ ಆನರ್ಹವಾಗಿತ್ತು.)

ಈ ಪರೀಕ್ಷೆಯಲ್ಲಿ ಕೇವಲ ಒಂದೆರಡು ಸ್ಯಾಂಪಲ್ ಗಳನ್ನು ಪರೀಕ್ಷಿಸಿದ್ದಲ್ಲ. ಪ್ರತಿಯೊಂದು ಬ್ರಾಂಡ್‌ನ 150 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಯಿತು. ಆ ಕಣ್ಣಿನ ಔಷಧಿಗಳ ಪ್ರತೀ ಬ್ಯಾಚಿನ ಕನಿಷ್ಠಪಕ್ಷ 20 ಕನ್‌ಟೈನರ್ಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು. (ಸಂಖ್ಯಾಶಾಸ್ತ್ರದ ಸೂತ್ರಗಳ ಪ್ರಕಾರ ಈ ಕನಿಷ್ಠ ಮಿತಿ ಸರ್ವಮಾನ್ಯವಾಗಿದೆ.)

ಹಾಗೆ ಪರೀಕ್ಷಿಸಲಾದ ಕಣ್ಣಿನ ಔಷಧಿ ಡ್ರಾಪ್ಸ್‌ಗಳ ಬ್ರಾಂಡ್‌ಗಳ ಸ್ಯಾಂಪಲ್‌ಗಳು ಕಣ್ಣಿನ ಔಷಧಿಯ ಇತರ ಮಾನದಂಡಗಳ ಪರೀಕ್ಷೆಯಲ್ಲಿ ತೇರ್ಗಡೆಯಾದವು ಎಂಬುದು ಸಮಾಧಾನದ ವಿಷಯ. ಅದಲ್ಲದೆ, ಭಾರತೀಯ ಫಾರ್ಮಕೋಪಿಯಾ 1996 ನಿಗದಿಪಡಿಸಿದ ಲೇಬಲಿಂಗ್ ಮಾಹಿತಿಗಳನ್ನು ಆ ಎಲ್ಲ ಔಷಧಿ ಡ್ರಾಪ್ಸ್‌ಗಳ ಕನ್‌ಟೈನರ್ಗಳಲ್ಲಿ ಮುದ್ರಿಸಲಾಗಿತ್ತು ಎಂಬುದು ಆವುಗಳ ಉತ್ಪಾದಕರ ನಿಯಮಪಾಲನೆಯನ್ನು ಸೂಚಿಸುತ್ತದೆ.

ಪ್ಯಾಕೇಜಿಂಗ್ ವಸ್ತುಗಳು
ಕಣ್ಣಿನ ಔಷಧಿ ಡ್ರಾಪ್ಸ್‌ಗಳನ್ನು ಗಾಜಿನ ಅಥವಾ ಪ್ಲಾಸ್ಟಿಕ್ ನ ಕನ್‌ಟೈನರ್ಗಳಲ್ಲಿ ಪ್ಯಾಕ್ ಮಾಡಿ ಮಾರಲಾಗುತ್ತದೆ. ಆದರೆ ಪ್ಲಾಸ್ಟಿಕ್ ಕನ್‌ಟೈನರ್ಗಳ ಮೂಲಕ ಬೆಳಕು ತೂರಿಬರುತ್ತದೆ. ಸಲ್ಪಸೆಟಮೈಡ್ ಡ್ರಾಪ್‌ಗಳಿಗೆ ಬೆಳಕು
ತಗಲದಂತೆ ಸಂಗ್ರಹಿಸಿಡಬೇಕು. ಹಾಗಿರುವಾಗ ಪ್ಲಾಸ್ಟಿಕ್ ಕನ್‌ಟೈನರ್ಗಳು ಇದಕ್ಕೆ ಸೂಕ್ತವೇ? ಅದಲ್ಲದೆ ಪ್ಲಾಸ್ಟಿಕ್ ಕನ್‌ಟೈನರ್ಗಳಲ್ಲಿ ಬೇರೊಂದು ತೊಂದರೆಯೂ ಇದೆ. ಪ್ಲಾಸ್ಟಿಕ್ ನಲ್ಲಿರುವ ಮೋಲ್ಡ್‌ ರಿಲೀಸ್ ಏಜೆಂಟ್ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಕನ್‌ಟೈರ್‌ನ ಪ್ಲಾಸ್ಟಿಕ್‌ನಿಂದ ಆದರೊಳಗಿನ ದ್ರಾವಣಕ್ಕೆ ಸೋರಿಕೆಯಾಗುವ ಸಂಭವವಿದೆ. ಸಿಇಆರ್ ಸೊಸೈಟಿ ಪರೀಕ್ಷಿಸಿದ ಐದರಲ್ಲಿ ಎರಡು ಬ್ರಾಂಡ್‌ಗಳ ಕಣ್ಣಿನ ಔಷಧಿ ಡ್ರಾಪ್ಸ್‌ಗಳು ಪ್ಲಾಸ್ಟಿಕ್ ಕನ್‌ಟೈನರ್ಗಳಲ್ಲಿದ್ದುವು. ಕಣ್ಣಿನ ಔಷಧಿ ಡ್ರಾಪ್ಸ್‌ಗಳ ಕನ್‌ಟೈನರ್ಗಳ ಮುಚ್ಚಳ ಒಡೆದು ಆವನ್ನು ಡ್ರಾಪ್‌ಹಾಕಲು
ಸಿದ್ದ ಮಾಡುವುದು ನಾಜೂಕಿನ ಕೆಲಸ. ಕಣ್ಣಿನ ಔಷಧಿ ಡ್ರಾಪ್ಸ್‌ಗಳ ಐದು ಬ್ರಾಂಡ್ಗಳ ಸ್ಯಾಂಪಲ್ ಗಳನ್ನು ಈ ಬಗ್ಗೆಯೂ ಮೌಲ್ಯಮಾಪನ ಮಾಡಲಾಯಿತು. ಹತ್ತು ಜನ ತೀರ್ಪುಗಾರರು ಪರೀಕ್ಷಿಸಿದಾಗ ಅಲ್ಬುಸಿಡ್ (10%) ಮತ್ತು ಅಲ್ಬುಸಿಡ್ (20%) ಡ್ರಾಪ್ಸ್‌ಗಳ ಕನ್‌ಟೈನರ್ಗಳ ಮುಚ್ಚಳ ಒಡೆಯಲು ಅತಿ ಆನುಕೂಲ ಎಂದು ಕಂಡುಬಂತು. ಯಾವುದೇ ಬ್ರಾಂಡ್‌ನ ಔಷಧಿ ಡ್ರಾಪ್ಸ್‌ಳ ಲೇಬಲ್ ನಲ್ಲಿ ಆದರೆ ಮುಚ್ಚಳ ಒಡೆಯುವುದು ಹೇಗೆ ಎಂಬ ಮಾಹಿತಿ ಮುದ್ರಿಸಿರಲಿಲ್ಲ.

ಆಯುರ್ವೇದ ಕಣ್ಣಿನ ಔಷಧಿ
ಆಯುರ್ವೇದ ಕಣ್ಣಿನ ಔಷಧಿಗಳೂ ಈಗ ಲಭ್ಯವಿವೆ. ಅಲೋಪಧಿ ಕಣ್ಣಿನ ಔಷಧಿ ಡ್ರಾಪ್ಸ್‌ಗಳಿಗಾದರೆ ಸುರಕ್ಷಿತತೆ ಮತ್ತು ಗುಣಮಟ್ಟ ನಿಯಂತ್ರಿಸುವ ಕಾನೂನುರೀತ್ಯಾ ನಿಯಮಗಳಿವೆ. ಆದರೆ ಆಯುರ್ವೇದ ಕಣ್ಣಿನ ಔಷಧಿಗಳನ್ನು ನಿಯಂತ್ರಿಸಲು ಅಂಥ ನಿಯಮ ಅಥವಾ ಮಾನದಂಡಗಳಿಲ್ಲ. ಅದೇನಿದ್ದರೂ ಆಯುರ್ವೇದ ಕಣ್ಣಿನ ಔಷಧಿ ಡ್ರಾಪ್ಸ್‌ಳ ಸುರಕ್ಷಿತತೆ ಮತ್ತು ಗುಣಮಟ್ಟ ಪರೀಕ್ಷೆಯು ಬಳಕದಾರರ ದೃಷ್ಟಿಯಿಂದ ಅತ್ಯಗತ್ಯ.

ಅದಕ್ಕಾಗಿಯೇ ಅಹಮದಾಬಾದ್‌ನ ಸಿಇಆರ್ ಸೊಸೈಟಿಯು ಆಯುರ್ವೇದ ಕಣ್ಣಿನ ಔಷಧಿ ಡ್ರಾಪ್ಸ್‌ಗಳು ಸೂಕ್ಷ್ಮಜೀವಿರಹಿತವೇ ಎಂದು ಪರೀಕ್ಷಿಸಲು ನಿರ್ಧರಿಸಿತು. ವ್ಯಾಪಕವಾಗಿ ಮಾರಾಟವಾಗುವ 8 ಬ್ರಾಂಡ್‌ಗಳನ್ನು ಪರೀಕ್ಷಿಸಿತು. ಭಾರತೀಯ ಫಾರ್ಮಕೋಪಿಯಾದ ಮಾನದ೦ಡಗಳ ಪ್ರಕಾರ ಅವುಗಳ ಪರೀಕ್ಷೆ ನಡೆಸಿತು.

ಡ್ರಾಪ್ಸ್‌ಗಳಲ್ಲಿ ಕೀಟ, ಕೂದಲು
ಆ ಎಂಟು ಬ್ರಾಂಡ್‌ಗಳ ತಲಾ 10ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ, ನಾಲ್ಕು ಬ್ರಾಂಡ್‌ಗಳ ಸ್ಯಾಂಪಲ್ಗಳಲ್ಲಿ ಮಾಲಿನ್ಯದ ಅಂಶಗಳು ಪತ್ತೆಯಾದವು. ಒಂದು ಬ್ರಾಂಡ್‌ನ ಸ್ಯಾಂಪಲ್ ನಲ್ಲಿ ಸತ್ತುಹೋದ ಕೀಟವೊಂದು ಸಿಕ್ಕಿತು! ಅದೇ ಬ್ರಾಂಡ್‌ನ ಇನ್ನೂಂದು ಸ್ಯಾಂಪಲ್ ನಲ್ಲಿ ಕೂದಲು ಸಿಕ್ಕಿತು! ಇನ್ನೊಂದು ಬ್ರಾಂಡ್‌ನ ಎಲ್ಲ ಸ್ಯಾಂಪಲ್ ಗಳಲ್ಲೂ ದೊಡ್ಡ ಕಣಗಳು ತೇಲಾಡುತ್ತಿದ್ದವು. ಅದಲ್ಲದೆ ಆಯುರ್ವೇದ ಕಣ್ಣಿನ ಔಷಧಿ ಡ್ರಾಪ್‌ಗಳ ನಾಲ್ಕು ಬ್ರಾಂಡ್‌ಗಳ ಲೇಬಲ್‌ಗಳಲ್ಲಿ ಡ್ರಗ್ಸ್ ಆಂಡ್‌ಕಾಸ್ಮೆಟಿಕ್ಸ್ ನಿಯಮಗಳ ಅನುಸಾರ ಆವಶ್ಕವಾದ ವಿವರಗಳನ್ನು ನಮೂದಿಸಿರಲಿಲ್ಲ.

ಕಣ್ಣಿನ ತುರ್ತು ತೊಂದರೆಗಳು
1) ಕಣ್ಣಿನಲ್ಲಿ ಕಸದ ಕಣ :
ಕಣ್ಣಿಗೆ ಕಸ ಬಿದ್ದಾಗ, ಕಣ್ಣನ್ನು ಕ್ಕೆಬೆರಳುಗಳಿಂದ ತಿಕ್ಕಬಾರದು. ಇದರಿಂದ ಕಣ್ಣುಗಳಿಗೆ ಹಾನಿಯಾದೀತು. ಕೆಲವೇ ಕ್ಷಣಗಳಲ್ಲಿ ಆ ಕಣ್ಣಿನ ಜಿನುಗುವ ಕಣ್ಣೀರು ಕಸದ ಕಣವನ್ನು ತೊಳೆದುಹಾಕಬಹುದು. ಇಲ್ಲವಾದರೆ ಕಾಯಿಸಿ ತಣಿಸಿದ ಆಥವಾ ಸ್ವಚ್ಚ ನೀರಿನಿಂದ ಕಣ್ಣು ತೊಳೆಯಬಹುದು. ಆಗಲೂ ಕಣ್ಣಿನಿಂದ ಕಸದ ಕಣ ಹೋಗದಿದ್ದರೆ ವೈದ್ಕರಿಗೆ
ತೋರಿಸಬಹುದು.
2) ಕಣ್ಣಿಗೆ ಹೊಡೆತ : ಹೊಡೆದಾಟದಲ್ಲಿ ಕಣ್ಣಿಗೆ ಬಿದ್ದ ಹೊಡೆತ ಜೋರಾಗಿದ್ದರೆ ಕಣ್ಣು ಬಾತುಕೊಳ್ಳುತ್ತದೆ ಹಾಗೂ ಕಣ್ಣು ಕಪ್ಪಾಗಬಹುದು. ಆಗ ಕಣ್ಣಿನ ಒಳಗಡೆ ಘಾಸಿ ಆಗಿರಬಹುದು. ಇಂಥ ಸಂದರ್ಭಗಳಲ್ಲಿ ತಕ್ಷಣವೇ ವೈದ್ಯರಿಗೆ ತೋರಿಸಬೇಕು.
3) ಕಣ್ಣಿಗೆ ಗಾಯ : ಕಣ್ಣಿಗೆ ಆಕಸ್ಮಿಕವಾಗಿ ಏನಾದರೂ ತಗಲಿ ಗಾಯವಾದಾಗ ನೀರಿನಿಂದ ಕಣ್ಣು ತೊಳೆಯಬಾರದು. ಆಗ ಕಣ್ಣಿಗೆ ಹಗುರವಾದ ಬ್ಯಾಂಡೇಜ್ ಕಟ್ಟಿ ವೈದ್ಕರ ಬಳಿಗೆ ಧಾವಿಸಬೇಕು. ಕಣ್ಣಿಗೆ ಕಡ್ಡಿ ಇತ್ಯಾದಿ ಚುಚ್ಚಿಕೊಂಡಿದ್ದರೆ ಅದನ್ನು ಕಿತ್ತು ತೆಗೆಯಬಾರದು. ಹಾಗೆ ಮಾಡಿದರೆ ಕಣ್ಣಿಗೆ ಇನ್ನಷ್ಟು ಘಾಸಿ ಆದೀತು.
4) ರಾಸಾಯನಿಕದಿಂದ ಸುಟ್ಟಾಗ : ಯಾವುದೇ ರಾಸಾಯನಿಕ ಕಣ್ಣಿಗೆ ಬಿದ್ದರೆ, ಕೂಡಲೇ 15 ನಿಮಿಷಗಳ ಅವಧಿ ಕಣ್ಣಿಗೆ ನೀರು ಸುರಿಯಬೇಕು. ಆಗ ಕಣ್ಣುಗಳನ್ನು ಸಾಧ್ಯವಾದಷ್ಟು ತೆರೆದುಕೊಂಡಿರಬೇಕು. ಅನಂತರ ತಕ್ಷಣವೇ ವೈದ್ಯರಲ್ಲಿಗೆ ಧಾವಿಸಬೇಕು. ಇಂಥ ತುರ್ತು ತೊಂದರೆಗಳ ಚಿಕಿತ್ಸಗಾಗಿ ಆಥವಾ ಕಣ್ಣಿನ ರೋಗಗಳ ಚಿಕಿತ್ಸೆಗಾಗಿ ರೋಗಿಗಳು ಬಳಸುವ ಕಣ್ಣಿನ ಔಷಧಿ ಡ್ರಾಪ್ಸ್‌ಗಳಲ್ಲಿ ಸೂಕ್ಷ್ಯಕ್ರಿಮಿಗಳು ಇದ್ದರೆ ಎಂಥ ಆಪಾಯವಾದೀತು!
ಅಂಥ ಅಪಾಯಗಳಿಂದ ಬಳಕೆದಾರರನ್ನು ರಕ್ಷಿಸಲಿಕ್ಕಾಗಿ ಸಿಇಆರ್ ಸೊಸೈಟಿ ತನ್ನ ವೈಜ್ಞಾನಿಕ ಪರೀಕ್ಷೆಗಳ ಫಲಿತಾಂಶಗಳನ್ನು ಔಷಧಿ ನಿಯಂತ್ರಣ ಆಧಿಕಾರಿಗಳಿಗೆ ತಿಳಿಸಿದೆ. ಆಮಾಯಕ ರೋಗಿಗಳ ಕಣ್ಣಿನ ದೃಷ್ಟಿ ರಕ್ಷಣೆಗಾಗಿ ಅಲೋಪಧಿ ಮತ್ತು ಆಯುರ್ವೇದ ಕಣ್ಣಿನ ಔಷಧಿ ಡ್ರಾಪ್ಸ್‌ಗಳ ಗುಣಮಟ್ಟ ನಿಯಂತ್ರಣಕ್ಕಾಗಿ ತುರ್ತಿನ ಹಾಗೂ ಕಟ್ಟುನಿಟ್ಟನ ಕ್ರಮಗಳನ್ನು ಕ್ಕೆಗೊಳ್ಳಬೇಕೆಂದು ಆ ಆಧಿಕಾರಿಗಳನ್ನು ಆಗ್ರಹಿಸಿದೆ.

ಕಣ್ಣಿನ ಡ್ರಾಪ್ಸ್‌ಗಳನ್ನು ಸುರಕ್ಷಿತವಾಗಿ ಶೇಖರಿಸಿಡಲು ತಂಪಾದ ಮತ್ತು ಬೆಳಕಿಲ್ಲದ ಜಾಗದಲ್ಲಿ ಇಡಬೇಕು. ಮಕ್ಕಳ ಕೈಗೆ ಸಿಗದಂತೆ ತೆಗೆದಿರಿಸಬೇಕು. ಸ್ನಾನದ ಕೋಣೆಯಲ್ಲಿ ಪೆಟ್ಟಿಗೆಯಲ್ಲಿ ಶೇಖರಿಸಿ ಇಡಬಾರದು. ಅಲ್ಲಿನ ಶಾಖದಿಂದಾಗಿ ಔರ್ಷಧಿಯಲ್ಲಿ ರಾಸಾಯನಿಕ ಬದಲಾವಣೆಗಳು ಆಗಬಹುದು.

ಕಣ್ಣಿನ ಡ್ರಾಪ್ಸ್‌ಗಳನ್ನು ಕಣ್ಣಿಗೆ ಹಾಕುವುದು ಹೇಗೆ? ——
► ಕಣ್ಣಿಗೆ ಔಷಧಿ ಡ್ರಾಪ್‌ಹಾಕಲು ಯಾವುದೇ ನಿರ್ದಿಷ್ಟ ವಿಧಾನ ಇಲ್ಲ. ಅಂತೂ ಔಷಧಿ ಸಂಪೂರ್ಣವಾಗಿ ಕಣ್ಣಿನೂಳಗೆ ಬೀಳಬೇಕು. ಕಣ್ಣಿನ ಔಷಧಿಯ ಪುಟ್ಟ ಬಾಟಲಿಯ ಮೂತಿಯ ತುದಿ ಕಣ್ಣಿಗೆ ತಗಲದಂತೆ ಎಚ್ಚರ ವಹಿಸಿರಿ. ಕೆಲವರು ಆ ತುದಿಯನ್ನು ಕಣ್ಣಿಗೆ ತಗಲಿಸಿ ಔಷಧಿ ಹಾಕಿಕೊಳ್ತಾರೆ. ಇದು ಆಪಾಯಕಾರಿ ಕ್ರಮ. ಯಾಕೆಂದರೆ ಕಣ್ಣಿನಲ್ಲಿರುವ
ಬ್ಯಾಕ್ಟೀರಿಯಾಗಳು ಔಷಧಿ ಬಾಟಲಿಯ ಮೂತಿಯ ತುದಿಗೆ ಅಂಟಿಕೊಂಡು, ಬಳಿಕ ಔಷಧಿ ದ್ರಾವಣಕ್ಕೆ ಆ ಸೋಂಕು ತಗಲಬಹುದು.
► ಕಣ್ಣುಗಳಿಗೆ ಔಷಧಿ ಡ್ರಾಪ್‌ಗಳನ್ನು ಹಾಕಿದ ಬಳಿಕ ತಲೆಯನ್ನು ಹಿಂದಕ್ಕೆ ವಾಲಿಸಿಕೊಂಡೇ ಇರಬೇಕು ಮತ್ತು ಎರಡರಿಂದ ಮೂರು ನಿಮಿಷಗಳವರೆಗೆ ಕಣ್ಣುಗಳನ್ನು ಮುಚ್ಚಿಕೊಂಡೇ ಇರಬೇಕು.. ಆಥವಾ ರೋಗಿಯು ಮಲಗಿಕೊಂಡಾಗ ಆತನ ಕಣ್ಣುಗಳಿಗೆ ಔಷಧಿ ಡ್ರಾಪ್ಸ್‌ಗಳನ್ನು ಹಾಕಬಹುದು.
► ಕಣ್ಣಿನ ಆಲಂಕಾರ ವಸ್ತುಗಳ ಬಗ್ಗೆ ಎಚ್ಚರ. ಕಣ್ಣಿನ ಸೌಂದರ್ಯ ಹೆಚ್ಚಿಸಲು ಇರುವ ವಸ್ತುವಿನ ಒಂದೇ ಕನ್‌ಟೈನರನ್ನು ಇಬ್ಬರು ಆಥವಾ ಹೆಚ್ಚು ಜನರು ಬಳಸುತ್ತಿದ್ದರೆ ಸೊಂಕು ತಗಲುವ ಅಪಾಯ ಜಾಸ್ತಿ.
► ಕಣ್ಣಿನ ಆಲಂಕಾರ ವಸ್ತುವಿನ ಬಳಕೆಯೋಗ್ಕ ಆವಧಿ ಕಡಿಮೆ. ಆದರ ಬಣ್ಣ ಬದಲಾದರೆ ಅಥವಾ ಅದರಿಂದ ವಾಸನೆ ಬಂದರೆ ಆದನ್ನು ಎಸೆಯಿರಿ.
► ಕಣ್ಣಿಗೆ ಸೊಂಕು. ತಗಲಿದಾಗ ಯಾವುದೇ ಆಲಂಕಾರ ವಸ್ತು ಬಳಸಬಾರದು. ಆಗ ಉಪಯೋಗಿಸುತ್ತಿದ್ದ ಎಲ್ಲ ಕಣ್ಣಿನ ಆಲಂಕಾರ ವಸ್ತುಗಳನ್ನು ಎಸೆಯಿರಿ.
► ಸತ್ತ್ವಭರಿತ ಅಹಾರ ಸೇವಿಸಿರಿ. ಇದರಿಂದ ವಯಸ್ಸಾದಾಗ ಬರಬಹುದಾಗ ಕೆಲವು ಕಣ್ಣಿನ ತೊಂದರೆಗಳನ್ನು ತಡೆಗಟ್ಟಲು ಸಾಧ್ಯ.
► ಉರಿಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿರಿ.
► ಕಣ್ಣುಗಳಿಗೆ ಆಗಾಗ ನೀರು ಎರಚಿಕೊಂಡು ಕಣ್ಣುಗಳನ್ನು ಸ್ವಚ್ಕವಾಗಿರಿಸಿರಿ.

ಉದಯವಾಣಿ 1-5-2003