ಮಹಾರಾಣಿಯ ಎದುರಿಗೆ ಕ್ಯಾಮೆರಾ ಸಜ್ಜಾಗಿ ನಿಲ್ಲಿಸಿ “ಸ್ವಲ್ಪ ಬಲಕ್ಕೆ… ಹ್ಞ… ಸರಿ… ಸ್ಟೆಡಿಪ್ಲೀಜ್.. ಸ್ವಽಽಲ್ಪ ಹೀಗೆ…. ಇನ್ನಿಷ್ಟು ಕಣ್ಣೀರು ಪ್ಲೀಜ್… ಕೊಂಚ ಜೋರಾಗಿ ಅಳಬೇಕು ಮ್ಯಾಡಮ್…. ಸರಿ ಸರಿ ಸ್ಟೆಡಿ ಪ್ಲೀಜ್. ಒನ್…ಟೂ….ಥ್ರೀ” ಅನ್ನಲಿಕ್ಕೂ ಮಹಾರಾಣಿಯವರು ಗೋಳೋ ಎಂದು ಅಳಲಿಕ್ಕೂ ಸರಿಯಾಯಿತು. ಫೋಟೋ ಚೆನ್ನಾಗಿ ಮೂಡಿತೆಂದು ಹಿಗ್ಗಿ “ಥ್ಯಾಂಕ್ ಯು” ಅಂದ ಫೋಟೋಗ್ರಾಫರ!
ಕ್ಯಾಮರಾವನ್ನು ಕಟ್ಟಿಕೊಂಡು ಅವನು ಹೊರಗೆ ನಡೆದ, ತನ್ನ ಗಂಡನು ಸತ್ತುದಕ್ಕಾಗಿ ತನಗಾದ ದುಃಖದ ಫೋಟೋ ತೆಗೆಯಿಸಿ, ಫೋಟೋಕ್ಕೆ ಕುಳಿತಾಗ ಹರಿಸಿದ ಕಂಬನಿಯನ್ನು ಒರಸಿಕೊಳ್ಳುತ್ತ ಮಹಾರಾಣಿಯವರು ಒಳ ಸೇರಿದರು. ಮಹಾರಾಣಿಯ ದುಕ್ಕದ “ಪೋಜ್” ಬಹಳ ಚೆನ್ನಾಗಿ ಆಯಿತೆಂದೂ ಅದನ್ನು ಕಂಡು ತಮಗೂ ಅಳು ಬಂದಿತೆಂದೂ ಸೇವಕಿಯರು ಅಂದು
ಕೊಂಡರು.
*****

















