ಎನ್ನ ಮನವದು ಅಹುದು ರನ್ನ ಗನ್ನಡಿ ಗೆಳತಿ
ಬಂದೊಮ್ಮೆ ನೋಡು ನಿನ್ನಯ ರೂಪವನ್ನಿಲ್ಲಿ
ಏನಿಹುದು? ಏನಿಲ್ಲವೆಂದು ದೂರದಿ ನಿಂದು
ಹಿಂದಿರುಗಿ ಹೋಗದಿರು ಸಾಶಂಕಳಾಗಿ ನೀ.
ಹಿಂದೊಮ್ಮೆ ಕೇಳಿದೆನು ಕೆಳೆತನದ ಗುರುಮಂತ್ರ
ಅ೦ದಿನಿಂದದನು ಜಪಿಸುವೆನು ಒಮ್ಮನದಿಂದ
ನಿನ್ನ ಶ್ರೇಯವೆ ಶ್ರೇಯ, ನಿನ್ನ ಗೆಲವೇ ಗೆಲವು,
ಎನ್ನದೆಲ್ಲವು ನಿನಗೆ ಅರ್ಪಿತವು. ಇದು ನಿಜವು.
*****

















