ನನ್ನ ದಾರಿ ನನಗೆ ಇಹುದು
ನಿನ್ನ ನೆರವು ಸತತ ಬಹುದು
ನೀನು ಶಿಲ್ಪಿ ನಾನು ಶಿಲೆಯು
ನೀನೆ ಕಡಿದು ಮೂಡಿಸಿರಲು
ನಿನ್ನ ಕಲೆಗೆ ಕುಂದು ಬರದು
ನಿನ್ನ ಸೃಷ್ಟಿ ಸಾವು ಇರದು
ಆದಿಶಕ್ತಿಯೊಬ್ಬ ನೀನು
ನಿನ್ನದೊಂದೆ ಕೃತಿಯು ನಾನು
ಅಳಿವು ಇರದು ನಿನ್ನ ಕೃತಿಗೆ
ಉಳಿವೆ ನಾನು ಕೊನೆಯ ವರೆಗೆ
ತಮ್ಮತನವು ತಮಗೆ ಮಾನ್ಯ
ತಮ್ಮ ರೂಪು ಚಿರ ನವೀನ
ತಮ್ಮ ಚೆಲುವು ತಮ್ಮ ನಲಿವು
ಹೆಮ್ಮೆ ತರುವುದದರ ಅರಿವು
ವಿಶ್ವ ಕವಿಯ ಪ್ರತಿಭೆ ನಾನು
ನಶ್ವರನೆಂದಂದರಾರು?
ಶಾಶ್ವತದಿಂದಿರುವೆ ನಾನು
ಆಶ್ವಾಸದ ಅಭಯ ನೀಡು
ಮಮಕಾರದ ಮಾತಿದಲ್ಲ
ಮಮಕಾರವ ಬಿಟ್ಟರಿಲ್ಲ
ಮಮಭಾವವೆ ಸಮಭಾವವು
ಮಮದರಿವೇ ಹಿರಿಗುರಿಯು
*****

















