Home / ಕವನ / ಕವಿತೆ / ಮನಗಳ್ಳನು

ಮನಗಳ್ಳನು

ಹಿಡಿಯಿರಿ, ಹಿಡಿಯಿರಿ, ಕಳ್ಳನ ಹಿಡಿಯಿರಿ, ಯೆನ್ನಯಮನ ಕದ್ದೊಡುತಿಹ|
ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ || ೧ ||

ಎಂದಿಗು ಕಳ್ಳನು ಗೊಲ್ಲಬಾಲನಿವ ಗೋಪಿಯ ಬೆಣ್ಣೆಯ ಕದ್ದಿಹೆನೂ |
ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನನ ತಾ ಶೆಳೆದಾ || ೨ ||

ಮಾವನ ಕಂಸನ ಮೇಲಣ ಮೋಹವ ಬಿಸುಟುತ ಲಟ್ಟಿದಯಮಸದಕೆ |
ಕಾಮನಪಿತ ತಾ ಮೋಹಿತ ಭಕುತಗೆ ಕಾಮಿತಫಲಗಳ ನೀಡುವನೂ || ೩ ||

ಸಣ್ಣವನಿರೆ ತಾ ಮಣ್ಣತಿಂದನೆಂದಣ್ಣನು ಜನನಿಗೆ ಪುಸಿನುಡಿಯೆ |
ತನ್ನಬಾಯತೆರೆದೋರಿದ ಜನನಿಗೆ ವಿಶ್ವದ ವಿಸ್ತರವದರೊಳಗೇ || ೪ ||

ತುಂಟಗಳ್ಳನಿವ ತಂಟೆಯೊಡ್ಡುವ ಸಂತತ ದುರ್ಜನ ಪಥದೊಳಗೇ |
ಗಂಟೆಚವಡಿಯಿವ ಭಕ್ತಿಯಗಂಟನು ಸಂತತಕದಿಯುವ ಜಗದೊಳಗೆ || ೫ ||

ತನ್ನಮನೆಯದು ದೂರವಿರುತಿರೆ ಸರುವರ ಮನದಲಿ ತಾ ಸುಳಿವ |
ತನ್ನಯ ಭಕುತರ ನಿಲ್ಲಿಡದಲೆ ತಾ ತನ್ನೆಡೆ ಸಂತತ ಶೆಳೆಯುವನು || ೬ ||

ಕಾಟವನಿವನ ತಪ್ಪಿಸೆ ಪೋಗಲು ಸೋಟತನವ ನಾನಾಶ್ರಯಿಸೆ |
ನಾಟಕಿಯಿವ ತಾಮುಂದೆ ಸುಳಿಯುತೆ ಬಗ್ಗಿಪನೆನ್ನಯ ಮನವನ್ನೂ || ೭ ||

ಸಂಭಾವಿತೆಯನು ನಟಿಸುತೆಪೋದನು ಸಂಧಿಯ ಗೈಯ್ಯಲು ಕೌರವನಡೆಗೆ |
ಸಂಧಿಮುರಿಯಲವ ಕಟ್ಟಿದ ಟೊಂಕವ ಕೌರವಮದ ತಾನಿಳಿಸಲ್ಕೆ || ೮ ||

ಪಾರ್ಥನ ಮೇಲಣ ಪ್ರೇಮದಲವ ತಾ ಸಾರಥಿಯಾಗುತೆ ಯುದ್ಧದಲಿ|
ಪಾರ್ಥಗೆಗೆಲುವನು ತಂದನು ಕೆೊಲ್ಲುತೆ ಮೋಸದಿರಿಪುಗಳಸೈನ್ಯಗಳಾ || ೯ ||

ನಿಂದ್ಯಕರ್ಮ ತಾನೆಂದಿಗು ರುಚಿಸದು ನಮ್ಮೀ ಕಳ್ಳಗೆ ಜಗದೊಳಗೆ |
ಕಂದನೆಂದು ತಾನಪ್ಪುವ ಜನಗಳ ಹೊಂದಲು ತನ್ನಡಿ ಭಕುತಿಯಲಿ || ೧೦||
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...