ಆ ರಕ್ಷಿ ಈ ರಕ್ಷಿ
ಶ್ರೀ ರಾಮನಿಗೆ ರಕ್ಷಿ
ಆ ಕ್ಷೇಮ ಈ ಕ್ಷೇಮ
ಅಕ್ಷಯ ಕ್ಷೇಮ ಈ
ಪ್ರೇಮನಾಮಗೆ ಕ್ಷೇಮ
ಪ್ರೇಮಧಾಮಗೆ ಕ್ಷೇಮ
ಆ ರಕ್ಷಿ ಈ ರಕ್ಷಿ
ಶ್ರೀರಾಮನಿಗೆ ರಕ್ಷಿ
ಪ್ರೇಮನಾಮಗೆ ರಕ್ಷಿ
ಪ್ರೇಮಧಾಮಗೆ ರಕ್ಷಿ
ನನ್ನ ರಾಮಗೆ ರಕ್ಷಿ
ಅಣ್ಣ ರಾಮಗೆ ರಕ್ಷಿ
ಕಣ್ಗೆ ಕಾಮನ ರಕ್ಷಿ
ಬೆನ್ಗೆ ಭೀಮನ ರಕ್ಷಿ
ಎದೆಗೆ ಬುದ್ಧನ ರಕ್ಷಿ
ತಲೆಗೆ ಸಿದ್ಧನ ರಕ್ಷಿ
ಸರ್ವಾಂಗಗಳಿಗೆ ಆ
ಸರ್ವೇಶ್ವರನ ರಕ್ಷಿ
ಅಣ್ಣ ರಾಮಗೆ ರಕ್ಷಿ
ನನ್ನ ರಾಮಗೆ ರಕ್ಷಿ
ಪ್ರೇಮಧಾಮಗೆ ರಕ್ಷಿ
ಪ್ರೇಮನಾಮಗೆ ರಕ್ಷಿ
ಶ್ರೀರಾಮನಿಗೆ ರಕ್ಷಿ
ಆ ರಕ್ಷಿ ಈ ರಕ್ಷಿ
ಆ ಕ್ಷೇಮ ಈ ಕ್ಷೇಮ
ಅಕ್ಷಯ ಕ್ಷೇಮ ಈ
ಪ್ರೇಮಧಾಮಗೆ ರಕ್ಷಿ
ಪ್ರೇಮನಾಮಗೆ ರಕ್ಷಿ
ಆ ರಕ್ಷಿ ಈ ರಕ್ಷಿ
ಶ್ರೀರಾಮನಿಗೆ ರಕ್ಷಿ
ಪ್ರೇಮದತ್ತಗೆ ಪ್ರೇಮ-
ದತ್ತನದೆ ರಕ್ಷಿ!!
*****


















