Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಕ್ಟೋಬರ್ ೧೬, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ಅಕ್ಟೋಬರ್ ೧೬, ೧೯೪೨

ಪ್ರೀತಿಯ ಕಿಟಿ,

ನಾನು ಬಹಳ ಬ್ಯೂಸಿ. ಈಗಷ್ಟೇ “La Belle Nivernaise”ದಿಂದ ಒಂದು ಅಧ್ಯಾಯವನ್ನು ಭಾಷಾಂತರಿಸಿದೆ. ಕೆಲವು ಹೊಸ ಪದಗಳ ಅರ್ಥ ಟಿಪ್ಪಣಿ ಮಾಡಿದೆ. ಆಮೇಲೆ ಒಂದು ತುಂಬಾ ಕೆಟ್ಟದಾದ ಗಣಿತ ಸಮಸ್ಯೆಯೊಂದನ್ನು ಬಿಡಿಸಿದೆ. ಆಮೇಲೆ ಮೂರು ಪುಟದಷ್ಟು ಫ್ರೆಂಚ್ ವ್ಯಾಕರಣ. ಈ ಗಣಿತ ಸಮಸ್ಯೆಗಳ ದಿನವೂ ಬಿಡಿಸುವುದೆಂದರೆ ನನಗಾಗದು. ಡ್ಯಾಡಿ ಕೂಡಾ ಅವು ಕ್ಲಿಷ್ಟವೆಂದು ಒಪ್ಪುತ್ತಾರೆ. ನಾನೇ ಅವರಿಗಿಂತ ಈ ಗಣಿತದಲ್ಲಿ ಚೆನ್ನಾಗಿದ್ದೇನೆ. ಆದರೂ ನಾವಿಬ್ಬರೂ ಗಣಿತದಲ್ಲಿ ಅಷ್ಟೇನೂ ಚೆನ್ನಾಗಿಲ್ಲ. ನಮಗೇನಾದರೂ ಸಮಸ್ಯೆ ಬಂದರೆ ಮಾರ್‍ಗೊಟ್‌ಳನ್ನು ಹುಡುಕುತ್ತೇವೆ. ಶಾರ್ಟ ಹ್ಯಾಂಡ್‌ನಲ್ಲಿ ಮೂವರಲ್ಲಿ ನಾನೇ ಮುಂದಿದ್ದೇನೆ.

ನಿನ್ನೆ ನಾನು “Assault” ಓದಿ ಮುಗಿಸಿದೆ. ಅದು ರಂಜನೀಯವಾಗಿದೆ. ಆದರೆ ಇನ್ನೂ “Joop ter Heul” ಕೈಗೆತ್ತಿಕೊಂಡಿಲ್ಲ. ನಿಜ ಹೇಳಬೇಕೆಂದರೆ ಸಿಸಿ ವ್ಯಾನ್ ಪ್ರಥಮ ದರ್ಜೆಯ ಬರಹಗಾರ್ತಿ. ನಾನು ನನ್ನ ಮಕ್ಕಳಿಗೆ ಆಕೆಯ ಪುಸ್ತಕಗಳ ಓದಲು ಖಂಡಿತ ಬಿಡುವೆ. ಮಮ್ಮಿ ಹಾಗೂ ಮಾರ್‍ಗೊಟ್ ಮತ್ತು ನಾನು ಮೂವರು ಕಳ್ಳರಂತೆ ಓದುತ್ತೇವೆ. ಅದೂ ಚೆನ್ನಾಗಿರುತ್ತೆ ಕೂಡಾ.

ನಿನ್ನೆ ಸಂಜೆ ಮಾರ್‍ಗೊಟ್ ಮತ್ತು ನಾನು ಒಂದೇ ಹಾಸಿಗೆಯಲ್ಲಿ ಬಿದ್ದುಕೊಂಡೆವು. ಅದು ಹೆದರಿಸುವಂತೆ ಆದರದು ಬರಿಯ ತಮಾಷೆಗಾಗಿತ್ತು. ನನ್ನ ಡೈರಿಯನ್ನು ಓದಲು ಕೊಡುವಂತೆ ಆಕೆ ಕೇಳಿದಳು. ನಾನೆಂದೆ. “ಆಗಲಿ, ಅದರಲ್ಲಿಯ ಕೆಲವನ್ನಾದರೂ ನೀನು ಓದಬಹುದು” ಆನಂತರ ನಾನಾಕೆಯ ಡೈರಿಯನ್ನು ಓದಲು ಕೊಡುವಂತೆ ಕೇಳಿದೆ. ಆಕೆ ಆಗಬಹುದೆಂದಳು. ನಾವಿಬ್ಬರೂ ನಮ್ಮ ಭವಿಷ್ಯದ ವಿಚಾರಗಳಲ್ಲಿ ಮುಳುಗಿಹೋದೆವು. ಆಕೆ ಏನಾಗಬಯಸುತ್ತಾಳೆಂದು ನಾನಾಕೆಗೆ ಕೇಳಿದೆ. ಆದರಾಕೆ ಅದನ್ನು ಹೇಳಲಿಲ್ಲ. ಅದನೋ ದೊಡ್ಡ ರಹಸ್ಯವೆಂಬಂತೆ ಮಾಡಿದಳು. ನಾನು ಪಾಠ ಕಲಿಸುವ ವಿಚಾರಗಳಲ್ಲಿ ಆಸಕ್ತಳು. ಆದರೆ ನನ್ನದು ಸರಿಯಿದ್ದರೂ ನನಗೆ ಆ ಬಗ್ಗೆ ಭರವಸೆಯಿರಲಿಲ್ಲ. ಆದರೆ ನಾನು ಆ ಬಗ್ಗೆ ಯೋಚಿಸುವೆ. ಹಾಗೇ ನಾನು ಇರಲುಬಾರದು.

ಇಂದು ಮುಂಜಾನೆ ನಾನು ಪೀಟರ್‌ನ ಅಟ್ಟಾಡಿಸಿಕೊಂಡು ಬಂದು ಹಾಗೇ ಆತನ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ. ಅವನಿಗೆ ಕೋಪ ಬಂದಿತ್ತು. ಅದನ್ನು ನಾನು ಕೇರ ಮಾಡಲಿಲ್ಲ. ಒಮ್ಮೆ ಆತ ನನ್ನೊಂದಿಗೆ ತುಂಬಾ ಆಪ್ತನಾಗಿದ್ದ. ನಿನ್ನೆಯಷ್ಟೇ ನಾನಾತನಿಗೆ ಸೇಬುಕೊಟ್ಟಿದ್ದೆ.

ನಾನು ತುಂಬಾ ಕುರೂಪಿಯಾಗಿರುವೇನೇ? ಎಂದು ಮಾರ್‍ಗೊಟ್‌ಳಲ್ಲಿ ಕೇಳಿದೆ. ಅದಕ್ಕವಳು ನಾನು ಆಕರ್ಷಕವಾಗಿರುವೆನೆಂದೂ, ಅದರಲ್ಲೂ ನನ್ನ ಕಣ್ಣುಗಳು ತುಂಬಾ ಚೆನ್ನಾಗಿವೆಯೆಂದು ಹೇಳಿದಳು. ನಿಜವೆಂದರೆ ಅದು ಸುಳ್ಳು ಎಂದು ನಿನಗನ್ನಿಸುವುದಿಲ್ಲವೇ?

ನಾಳೆಯವರೆಗೆ

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...