ಸುತ್ತೇಳು ಸಂದ್ರ ಬಾಲೀ ಸುತ್ತಿಗೆ ಬಾರೆ ಕೋಲೇ
ಮಾದೊಡ್ಡ ದರಿಯಾ ಮುಂದೆ ಆಡಿ ಬಾರ ಕೋಲೇ || ೧ ||

ಸರಣೂ ಸರಣೂ ಸರಣಂಬು ಸಾಮಿಗೆ
ಗಂಗೇಯ ದೇವರಿಗೆ ಸರಣಂಬುದಾ || ೨ ||

ಸರಣೂ ಸರಣೂ ಸರಣಂಬು ಸಾಮಿಗೆ
ಹಿಂದೀನ ದೇವರಿಗೆ ಸರಣಂಬುರಾ || ೩ ||

ವಳಗಿದ್ದ ಮೊದವುಲಿ ಹೆದರಿಸುಬೇಡಾ
ಉದರೀಸಿ ಕೊಡುವೇ ಕೆಂಡಗಳಾ || ೪ ||

ಅಂಗಾಳ ಸಾರಿಸಿ ಮಂಗಳಾ ಹೊಲಿ ಹೊಯ್ದೀ
ರಂಬೇ ನಿನ ಮಗಳಾ ಮದುವಿಗೆ ಕೋಲೇ || ೫ ||

ಯಂತಾಯಂತಾ ಜಾಣಿಯಂತಾ ಜಾಣಮ್ಮಾ
ಇಂತಾರ್ ಹುಡಗೀಯೇನ ಮೋಳ ಯೇನ ಸೋಗಣ್ಣಾ || ೬ ||

ಯಲ್ಲರ ಕತ್ರ ಮಲ್ಲರ ಜಾಣೆಯೆಲ್ಲಿಗೆ ಬಿತ್ತೇ ಮೂಗತೀ
ಬಾವನಾರ್ ಮೋರೀ ನೋಡಿ ಬಾವೀಲ್ ಬಿತ್ತೇ ಮೂಗತೀ || ೭ ||

ಹಳ್ಳಾ ಹರವಾದ ಕಂಡೆ ಗೊಳ್ಳೀ ಮ್ಯಾವಾದ ಕಂಡೇ
ವಳ್ಳೆ ವಳ್ಳೇ ಹುಡಗೀ ಕಂಡೆ ಅಲ್ಲೇ ಕೂತ್ಕಂಡೇ || ೮ ||

ಆರೂ ತಾಸಿನ ಬಿಸೀಲಲೀ ಹುಡಗೀ ಬಂದಳು ನೀರೀಗೇ
ಹುಡಗೀ ಬಂದಾ ಸಮಯಾ ನೋಡಿ ಹುಡಗಾ ಬಂದಾ ದಾರೀಗೇ || ೯ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.