ಬಂದಿದೆ ನಾ ನೀಗ ಪಾರ್‍ಥ ಸಾರಥಿ
ಎನ್ನಲಿ ತುಂಬಿದೆ ದೋಷರಾಶಿ
ಕ್ಷಣ ಕ್ಷಣ ಎನ್ನನ್ನು ಪರಕಿಸದಿರು
ಉರುಳುವೆ ಪಾತಾಳಕ್ಕೆ ನಾನಾಗಿ ಘಾಸಿ

ಪ್ರಪಂಚದ ಈ ಬೆಂಗಾಡಿನಲಿ
ಚೊಕ್ಕ ಚಿನ್ನವಾಗಿ ಬದುಕುಲುಂಟೆ
ಅಂಗದ ಇಂಚಿ ಇಂಚಿನಲಿ ಕಪ್ಪು ಚಿಪ್ಪು
ನಾನು ಪಾವಿತ್ರ್ಯನೆಂದು ಹೇಳಲುಂಟೆ

ಹೆಣ್ಣು ಹೊನ್ನು ಮಣ್ಣು ಮಾಯೆ
ಆಸೆ ಗೂಡು ಕಟ್ಟಿವೆ ಅದರ ಮೇಲೆ
ನೀ ತೋರಿದ ದಾರಿಯಲಿ ನಡೆದಾದರೆ
ಅದು ನಿನ್ನ ಕೃಪೆ ತೋರಿದ ಮೇಲೆ

ನನ್ನ ಬದುಕು ಮುನ್ನವು ಕತ್ತಲು
ನನ್ನ ಬದುಕಿನಾಚೆಗೆ ಬರೀ ತಮಸು
ವರ್‍ತಮಾನ ನನಗಾಗಲಿ ನಿರ್‍ಭಾವ
ಸಾಧನೆ ಸಮಾಧಿಯಲಿ ಇರಲಿ ಹುಮ್ಮಸು

ಕೈ ಮೇಲೆತ್ತಿ ನಾನು ಶರಣು ಬಂದೆಹೆನು
ದೋಷಗಳಣಿಸುತ್ತ ಆಚೆ ದೂಡದಿರು
ನೀನು ಕೃಪಾ ಸಾಗರ ಹರಿಸು ಗೋವಿಂದ
ಮಾಣಿಕ್ಯ ವಿಠಲನಾಗಿ ದೂರ ಮಾಡದಿರು
*****