ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ
ಮನವುನೊಂದು ಘಾಸಿಗೊಂಡಿರಲಿ
ಆದರೆ ಮನವನ್ನು ಓಲೈಸಲು ನಿ
ಕೆಟ್ಟದಕ್ಕಾಗಿ ಪದರು ಹಾಸದಿರಲಿ

ಮನದಲಿ ನಿರ್‍ಧಾರವೇ ಅಚಲವಾಗಿರಲಿ
ಏಕೆಂದರೆ ಮನವು ನಿನ್ನದಲ್ಲವೇ
ನೀ ನಾಡಿದ ಮಾತು ಪಾಲಿಸಬೇಕೆಂದು
ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!

ಕೆಟ್ಟ ಆಲೊಚನೆ ಮನದಲ್ಲಿದ್ದಾಗ
ತನುವ ದಂಡಿಸಿ ಮನಕ್ಕೆ ಶಿಕ್ಷಿಸು
ಅತ್ತ ಇತ್ತ ಸುಳಿದು ಪಾಪಿಯಾಗದಂತೆ
ಮನಕ್ಕೆ ನಿತ್ಯವು ನೀನು ರಕ್ಷಿಸು

ಮನವ ತಿದ್ದಲು ಕಟುಕನಾಗು
ಮನಕ್ಕೆ ತಿಳಿಸಲು ಗುರುವಾಗು
ಹೆಜ್ಜೆ ಹೆಜ್ಜೆ ನಿನ್ನ ಕರ್‍ಮಗಳಿಗೆಲ್ಲ
ಕಾರಣವಾಗುವ ಮನಕ್ಕೆ ದಾರಿಯಾಗು

ಇಂದ್ರಿಯ ಚಪಲದಿ ಮನವ ಥಳಿಸಿ
ಪರಮಾತ್ಮನ ಪಾದಕ್ಕೆ ನಮನ ಪಡಿಸು
ಮನವು ಶುದ್ಧವಾಗಿ ಆತ್ಮವಾಗಲು
ಮಾಣಿಕ್ಯ ವಿಠಲನಾಗಿ ಹೆಜ್ಜೆ ಇರಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೪
Next post ಪಾಪಿಯ ಪಾಡು – ೧೭

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…