ಚಿನ್ನದ ಚೆಲುಬಿನ ಚಂದದ ಜೀವನ

ಚಿನ್ನದ ಚೆಲುವಿನ ಚಂದದ ಜೀವನ
ಹೊನ್ನಿನ ತಂದೆಯು ನೀಡಿದನು
ಮುತ್ತಿನ ನಿರ್ಮಲ ಉತ್ತಮ ಜೀವನ
ಸತ್ಯದ ತಂದೆಯು ಮಾಡಿದನು

ಮಮತೆಯ ಮುರಳಿಯ ಮೋಡಿಯ ಮಂತ್ರಕೆ
ಸಕಲವ ಮರೆಯುತ ನಾ ಬಂದೆ
ಹೃದಯದ ಕತ್ತಲೆ ಕಾಲ್ತೆಗೆದೋಡಿತು
ಬೆಳಕಿನ ದೇವತೆ ನಾನಾದೆ

ಎತ್ತರ ಎತ್ತರ ಚಿಂತನೆ ಬಿತ್ತರ
ಶಿಖರದ ಸಾಧನೆ ನಾಗೈದೆ
ಶುಭಗುಣ ಶಿವಗುಣ ಸದ್ಗುಣ ತುಂಬಲು
ಶುಭ ಶ್ರೀ ಶೈಲವ ನಾಕಂಡೆ

ರಿಂಜಿಂ ರಿಂಜಿಂ ಅತೀಂದ್ರಿಯ ಸುಖ
ಮಂಜುಳ ಮೋಜನು ನಾಪಡೆದೆ
ಹೊಸತನ ಹೊಸಗುಣ ಹೊಸರಸ ಹೊಮ್ಮಲು
ಹರ್ಷದ ವರ್ಷವ ನಾಕಂಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಪಂಚ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೬

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…