ನಾವೆಲ್ಲಾ… ಒಂದೇ
ಭಾರತ ಮಾತೆಯ ಮಕ್ಕಳು
ಭೇದ-ಭಾವ ಬೇಡ ನಮ್ಮಲಿ

ಹಿಂದು, ಮುಸ್ಲಿಂ, ಕ್ರೈಸ್ತರೆನ್ನದೆ
ನಾವೆಲ್ಲಾ ಮೊದಲು ಭಾರತೀಯರು
ಸಹೋದರತೆಯ ವಾತ್ಸಲ್ಯದಲಿ
ಸಹನೆ, ಶಾಂತಿಯೇ ನಮ್ಮ ಕೈಗೋಲು

ಜಾತಿ, ವಿಜಾತಿಯೆನ್ನದೆ…
ಜಾಗೃತರಾಗಿರಬೇಕು ನಾವಿಂದು
ರಾಷ್ಟ್ರೀಯತೆ ತುಂಬಿರಲಿ ಸದಾ ನಮ್ಮುಸಿರಿನಲಿ
ಜಾತಿ, ದ್ವೇಷ, ರಾಷ್ಟ್ರದ್ರೋಹಿಗಳ
ಬೇರುಸಹಿತ ನಿರ್ಮೂಲಿಸುತಲಿ

ನಿರ್ಮಲ, ಸುಂದರ ಶಕ್ತಿಯ
ಭವ್ಯ ಭಾರತಕ್ಕೆ ತಲೆಬಾಗಿ
ಬಾಳೋಣ ನಾವೆಲ್ಲಾ ಭಾರತೀಯರಾಗಿ
ಪ್ರಗತಿ ಚಕ್ರದ ಭಾರತ ಘೋಷಣೆಯಲಿ
ಅಭ್ಯುದಯದ ಕನಸಿನ ಹರಿಕಾರರಾಗುತಲಿ
ನಾವು ಒಂದು, ನಾವೆಲ್ಲಾ ಒಂದು.

***