ದೀಪ

ಮಿನುಗುವಾ ದೀಪಗಳೇ ಸಾಗಿಬನ್ನಿ
ಮಮತೆಯ ತೈಲ ದೀಪದೊಳು ತುಂಬಿಸಿ
ತನುವ ಬತ್ತಿಯ ಮಾಡಿ ಹಚ್ಚುವೆನು ದೀಪ
ಬೆಳಗಿಸುವೆ ನಾ ಸಾಲು ಸಾಲಾಗಿ ಜೋಡಿಸಿ

ಮಿಂಚು ಹುಳುವಿನಂತೆ ಜೊತೆಯಲ್ಲಿ ಬನ್ನಿ
ನಾನಿಡುವಾ ಅಡಿಗೆ ಬೆಳಕಾಗಿ ನಿಲ್ಲಿ
ನನ್ನ ಬದುಕಿಗೆ ಜೊತೆಯಾಗಿ ನೀನಿರಲು
ನಿನ್ನ ಹಾಗೆ ಬಾಳುವ ಆಸೆ ಅತಿಯಾಗಿರಲು

ಲೋಕದ ಕತ್ತಲೆಯ ಕಳೆಯುವ ನೀನು
ನನ್ನ ಮಸ್ತಕದ ಜ್ಞಾನ ದೀಪ ಉರಿಸು ಇನ್ನು
ಮನಗಳ ಕತ್ತಲೆಯ ನಾ ಕಳೆಯಬೇಕಿನ್ನು
ಜ್ಞಾನದಾ ಜ್ಯೋತಿಯಾಗಿ ಮಾಡು ನನ್ನನ್ನು

ದೀಪದಿಂದ ದೀಪವ ಬೆಳಗುತ ಸಾಗುವಂತೆ
ಮನದಿಂದ ಮನೆಗಳ ತಮವನ್ನ ಕಳೆಯುವ
ಜಗಕೆಲ್ಲ ಜ್ಞಾನದಾ ಜ್ಯೋತಿಯ ಬೆಳಗಿಸುವ
ಶಕ್ತಿಯನ್ನು ನನಗೆ ಕರುಣಿಸು ಬಾ ದೀಪವೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವು
Next post ಸ್ಥಾನಪಲ್ಲಟ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…