“ನೋಡು! ನಾನು ಆಕಾಶದಿಂದ ಧುಮಿಕಿದಾಗ ಆಡುವ ಮಕ್ಕಳು ನನ್ನ ಹನಿಯನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ರೈತಾಪಿ ಜನರು ನನ್ನ ಮಳೆಹನಿ ಸುರುವಿಕೆಯಿಂದ ಸಂತಸ ಪಡುತ್ತಾರೆ. “ಎಲೆ! ಕಣ್ಣೀರೆ! ನೀನೇಕೆ ಕಣ್ಣಿಂದ ಹನಿಹನಿಯಾಗಿ ಸುರಿದಾಗ ದುಃಖವನ್ನು ಕೊಡುತ್ತೀಯಾ?” ಎಂದಿತು ಮಳೆಹನಿ. “ನಾನು ಹೃದಯ ಹಗುರ ಮಾಡುತ್ತೇನಲ್ಲಾ ಅಷ್ಟು ಸಾಲದೆ?” ಎಂದಿತು ಕಣ್ಣು ಮಿಟಿಕಿಸಿ ಕಣ್ಣೀರ ಹನಿ.
*****