ಜಗದಲೆಲ್ಲ ಹುಡುಕಿದೆ ನಿರಂತರ
ಕಳೆದವೆಷ್ಟೊ ಗೆಳತಿ ಮನ್ವಂತರ
ಎಲ್ಲೂ ಸಿಗಲಿಲ್ಲ ನಿನ್ನ ನಗುತರ
ನಾ ಮಡಿಲ ಮಾತೆ ಮಗು ತರ ||
ಅದೆಷ್ಟು ಶಕ್ತಿ ನವ ರೋಮಾಂಚನ
ಜಡ ಬದಕಿಗೆಲ್ಲ ಗರಿಗೆದರಿ ಸಿಂಚನ
ಎಣಿಸಲಾರದ ಬಣ್ಣ ಬಗೆಯರಂಜನ
ಮನದೊಳು ಸುಳಿಯೊಡೆದ ತನನನ |||
ನಿನ್ನ ನಗುವಿನಣುವದೇ ಪ್ರಮಾಣು
ನನ್ನ ಚೈತನ್ಯ ಜಲರೂಪಿ ಪರಮಾಣು
ಕ್ಷಣಕೆಲ್ಲ ನವನವೋನ್ಮಾದ ಪಯಣ
ಜತೆಗಿದೆಯಲ್ಲೆ ನಿನ್ನ ನಗುವದೇ ಪ್ರಾಣ ||
*****
Latest posts by ರಾಜಪ್ಪ ದಳವಾಯಿ (see all)
- ಪಂಚರಾತ್ರ (ತೊಗಲುಬೊಂಬೆಯಾಟ) - August 7, 2013
- ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು) - December 14, 2011
- ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು) - December 9, 2011