ಬ್ರಹ್ಮಜ್ಞಾನದಲಾವಿ ಆಡುನು ಬಾರೋ ನೀನಽ
ಇಮಾಮ ಹಸೇನಹುಸೇನ                    ||ಪ||

ನಾದವಲಿ ಸಾದವಲಿ
ಶುಮರಾರಿಧಾರನ್ನ ವರವೇನು ಶರಣ
ಇಮಾಮ ಹಸೇನ ಹುಸೇನ                    ||೧||

ಹಮರೇ ನೂರಾ ತುಮರೇ ಅಲಿ
ಶುಮರಾರಿಧರನ್ನ ವರವೇನು ಶರಣ
ಇಮಾಮ ಹಸೇನ ಹುಸೇನ                    ||೨||

ಅಸಮ್ ಶಿಶುನಾಳ ಮುಸಲಿಮ್ ಶಾಹಿರ
ಹಸನಾದ ಅಲಾವಿ ಆಡುನು ಬಾರೋ
ಇಮಾಮ ಹಸೇನ ಹುಸೇನ                   ||೩||
*****