ಕಣ್ಣಲ್ಲಿ ಕಣ್ಣಿಟ್ಟು
ಮೌನಕ್ಕೆ ಭಾಷೆ ಕೊಡೋಣ

ಹೇಳು

ಅಂಥ ಕ್ಷಣವೇ ಸ್ವರ್ಗ
ಅದಕೆ ದೇವರು ಮಾತಾಡುವ
ಸಮಯ ಅನ್ನೊಣ

ಅಥವಾ

ಪಂಚಮ ವೇದ ಎಂದು ಹೆಸರಿಡೋಣ

ಅಥವಾ

ಅದಕೆ ಯಾವ ಹೆಸರೂ ಬೇಡ
****
ನಾವು ಭೇಟಿಯೇ ಆಗಿಲ್ಲ
ಆದರೂ ನಾವು ಶತಮಾನಗಳಷ್ಟು
ಹಳೆಯ ಗೆಳೆಯರು
ಅದಕ್ಕೆ
ಕಣ್ಣಭಾಷೆ ಎಂದು ಹೆಸರು
***
ಈ ಪ್ರಪಂಚ ಕುರುಡು
ಅದಕೆ ಪ್ರೇಮಿಸುವುದು
ಗೊತ್ತಿಲ್ಲ
ಜಂಜಡದಲ್ಲೇ ವಯಸ್ಸು
ಕಳೆದು ಕೊಳ್ಳುವ ಜಗತ್ತು ಜನ

ಆದರೆ
ನಮಗೆ ನೋಡು; ಪ್ರೇಮಿಸಿದರೂ ದಣಿವಿಲ್ಲ

ಹಾಗೆ ನೋಡಿದರೆ

ಪ್ರೇಮದಿಂದ ಹೊರಗುಳಿಯದಷ್ಟು
ಪ್ರೇಮಿಸುತ್ತಿದ್ದೇವೆ

ಮುನಿಸುಕೊಳ್ಳಲು
ಬಿಡುವಿಲ್ಲದಷ್ಟು ಬೆರೆತಿದ್ದೇವೆ
*****