ಬೇಲಿ ಮರೆಯಲಿ ಯಾರಿಗೂ ಕಾಣದೆ ನಿಂತು ಬೀಳ್ಕೊಂಡಿತೊಂದು ಜೀವ ದಿನಗಳು ಮುಗಿದುವೊ ತಿಂಗಳು ಉರುಳಿದುವೊ ಒಂದರ ಮೇಲೊಂದು ವರ್‍ಷಗಳು ಸಾಗಿದುವೊ ಆಶಾಢಗಳು ಬಂದು ಹಾದು ಹೋದುವೊ ಶ್ರಾವಣಗಳು ಬಂದು ಕಳೆದು ಹೋದುವೊ ದಸರೆ ದೀಪಾವಳಿಗಳು...
ಹಸುವಿನ ಹೆಸರು ಯಶೋದಾ ಅದರ ಬಣ್ಣ ಊದಾ ಅದೊಂದು ಕರುವನು ಈದ ಸಂಗತಿಯೇನು ಪ್ರಮಾದ? ಅದರಿಂದೆನಗೀ ಕವಿತೆಯ ಬಾಧ ಪ್ರಾಸವ ಬರೆವ ವಿನೋದ. ನಾನದಕಿತ್ತುದು ನೂರು ರುಪಾಯಿ ಮಧ್ಯಸ್ಥಿಕೆಗಿರೆ ರಂಗಾಬೋಯಿ ನೆರೆಮನೆಯೊಳಗಿದಕಾಯಿತು ಸಾಲ ಬಿತ್ತರಿಸಿತೆಮ್ಮ...