Day: December 3, 2024

ಉಮರನ ಒಸಗೆ – ೪೬

ಇದು ನಿಸದವೆನಗೀಗ : ಪರತತ್ವದೀಪದಲಿ ನಲುಮೆಯಾನುಂ ಮೆರೆಗೆ, ಮುನಿಸಾನುಮರಿಗೆ; ದೇಗುಲದೊಳದನರಸಿ ಕಾಣದಿವುದಕಿಂತ ಮಧುಗೃಹದೊಳದರಿಂಬ ಮೂಸುವುದೆ ಲೇಸು. *****

ಯುದ್ಧಸಮರ್ಥನ ವಾದ

ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ […]