ದೀಪವಾರಿದೆ ಹಣತೆ ಉಳಿದಿದೆ ನಿನಗೆ ಕೋರುವೆ ಮಂಗಳ ಬೆಟ್ಟ ಹತ್ತಿದೆ ಕಣಿವೆ ದಾಟಿದೆ ಕಂಡೆ ಕಾಣದ ಹೊಸ ಜಗ ಗಾಳಿಯಲ್ಲಿ ನೂರು ರಾಗ ಎದೆಯೊಳೆಲ್ಲಾ ಝಗಮಗ ಅದಕೆ ನಿನಗೆ ವಂದನೆ ಬೇರೆಯಿಲ್ಲ ಚಿಂತನೆ ಬೆಳದಿಂಗಳ ಹಾಲ ಕುಡಿದೆ ಚಂದ್ರನ ಮೇಲೆ ಆಡಿದೆ ತೇಲುತ ಬ...

ಎಲ್ಲ ಕವಿತೆಗಳು ಗಿಲೀಶನ ಮೇಲೆಯೇ ಆದರೆ ಏನು ಚೆನ್ನ ನನ್ನ ಮೇಲೂ ಬರೆ ಎಂದ ಸಿರೀಶ ಅರೆ ನೀನೂ ಅವನೂ ಒಂದೇ ಅಲ್ಲವೇ ಹಾಗಾದರೆ ಬೇರೆ ಬೇರೆಯೇ ಹೌದು ನೀನು ಬೇರೆ ಅಂದರೆ ಬೇರೆ ಇಲ್ಲ ಎಂದರೆ ಇಲ್ಲ ಆದರೆ ಎರೆಯುವುದಿದೆಯಲ್ಲಾ ಆ ನಿನ್ನ ಪ್ರೀತಿ ನಿಷ್ಪಕ್ಷ...

ಇಲ್ಲೇ ಇರು ಆಡಿಕೊಂಡಿರು ಎಲ್ಲಿಯೂ ಹೋಗದಿರು ಹೂಂಗುಟ್ಟಿತು ಮಗು ಮುಖದ ತುಂಬ ನಗು ಹೊರಳುತ್ತಾ ಉರುಳುತ್ತಾ… ಅಂಬೆಗಾಲನು ಇರಿಸಿತು ಲಜ್ಜೆ ಬಟ್ಟೆಯ ತೊಟ್ಟು ತಿಪ್ಪ ಹೆಜ್ಜೆಗಳನಿಟ್ಟಿತು ಬಾಯಿಗೆ ಬೆರಳು ಕಣ್ಣಿಗೆ ಮರಳು ಹೋ… ಎಂದಿತು ಹಾ...

ಮುಂಜಾನೆಯ ಒಂಬತ್ತರ ಸುಮಾರಿಗೆ ಕರೆಗಂಟೆ ಕೇಳಿಸಿತು. ಯಾವುದೋ ಕೇಸ ಪೇಪರನ್ನು ತಿರುವುತ್ತ ಕುಳಿತಿರುವ ಶ್ರೀನಿವಾಸರಾಯ ಬಾಗಿಲ ತೆರೆಯಲು ಬಂದ. ಬರುವಾಗ ಈ ಹೊತ್ತಿನಲ್ಲಿ ಮತ್ತೆ ಯಾರಿರಬಹುದು ಹಾಲಿನವ, ಪೇಪರಿನವ, ಅಗಸರೆಲ್ಲ ಬಂದು ಹೋಗಿದ್ದಾರೆ. ಯಾರ...

ಗೆಳೆಯ ಟೈಲರ್ ಇದ್ದ ಆರೂವರೆ ಅಡಿ ವಿರಗಿ ವಿರಾಹಿ ನಿರಾಶಾವಾದಿ ಕಳೆದಿಹನು ಏಳೂವರೆ ದಶಕ ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ ಅನುಮಾನದಿ ಕಾಣುತ್ತಿದ್ದ ಅವರಿವರನು ಆದರೂ ನಂಬಿ ಇವನ ಬಳಿ ಸುಳಿವ ಗಿರಾಕಿ ಸ್ನೇಹಿತರನೇಕರು ಸಮಯಕೆ ಅಂಗಿ ಹ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...