ಸೀತಾಸ್ವಯಂವರ ಯಜ್ಞಯಾಗಾದಿಗಳಿಂದ ಸುಪ್ರೀತರಾದ ವಿಶ್ವಾಮಿತ್ರರು ಸೀತಾಸ್ವಯಂವರ ಸುದ್ದಿ ಕೇಳಿ ಶ್ರೀರಾಮಲಕ್ಷ್ಮಣರಿಗೆ ಮದುವೆಯ ಮಂಗಳ ಕಾರ್ಯವನ್ನು ನೆರವೇರಿಸಲು ನಿಶ್ಚಯಿಸಿ ಮಿಥಿಲಾನಗರಕ್ಕೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಬರುತ್ತಿರುವಾಗ ಶ್ರೀರಾಮನು ಅಹಲ್ಯೋದ್ಯಾರ ಮಾಡಿದನು "ಅಹಲ್ಯೆ! ಪೂರ್ವಕಾಲದಲ್ಲಿ ಜನಕರಾಜನ ಪುರೋಹಿತರಾದ...