ನನ್ನ ಹಾಡು ಹಾಡು ಹಾಡಿನಾನಂದದ ರೂಪ ಜೀವ ಜೀವ ಹೃದಯಗಳಲ್ಲಿ | ಮನುಜ ಮನಕೆ ತಂಪು ನೀಡಿ ಬಾಳಿನಂಗಳದಲಿ ಬೆರೆಯಲಿ | ಮನವು ತೊಟ್ಟಿಲಾಗಿಸಿ ತೂಗಿ ನೊಂದ ಜೀವಿಗೆ ನಲಿವಾಗಲಿ ! ಬೆರೆತಾದ ಬಾಳಿಗೆ ಸ್ವರವಾಗಿ ಸೆಳೆದು ಪ್ರೇಮ ಸುಧೆಯಾಗಲಿ ! *****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ್ಯವಾಗದ ಬರಡು, ಕಣ್ಣಿದ್ದೂ ಕುರುಡು; ಕಂಡರೂ ಸಹ ಬಿತ್ತ, ವಂಚಿಸುತ್ತದೆ ಕಣ್ಣ ಒಳಗೆ ಮಲಗಿರುವ ಮರ ಇದ್ದೂ ಇಲ್ಲದ ಥರ; ದರ್ಶನ ಭಾಗ್ಯವಿಲ್ಲ ಹೋಳು […]