ಅಲ್ಪ ತೃಪ್ತನಾಗಿರೆ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
- ಅನುಕರುಣೆಯೆಂಬ - January 18, 2021
- ನಾನು ಅಂಧನಾಗಿ - January 11, 2021
- ಅಲ್ಪ ತೃಪ್ತನಾಗಿರೆ - January 4, 2021
ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ ಬರೀ ಕೆಡಕು|| ಅತಿಯಾದ ಆಸೆ ತರುವುದು ನಿರಾಸೆ| ಬರೀ ಹಗಲುಗನಸು ನೋಡಲಷ್ಟೇ ಸೊಗಸು ನಿಜವಾಗದೆಂದೆದಿಗೂ ಸತ್ಯಕ್ಕೆ ದೂರವಿಹುದು|| ಆಸೆಗಳಿರಬೇಕು ಈಡೇರುವಷ್ಟು, […]