Day: December 25, 2020

#ಕವಿತೆ

ಯಾವುದಿಲ್ಲ ಯಾವುದುಂಟು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಯಾವುದಿಲ್ಲ ಯಾವುದುಂಟು ಎಲ್ಲ ನಂಟೂ ನನ್ನೊಳುಂಟು ಇಂಗ್ಲೇಂಡಿನ ಹಳಿಯಲ್ಲಿ ನಾ ಬಯಸುವ ಹೆಂಡವುಂಟು ಸ್ಪೇನ್ ದೇಶದ ಪೇಟೆಯಲ್ಲಿ ನಾ ಮೆಚ್ಚುವ ಹುಡುಗಿಯುಂಟು ಯಾರದೋ ಚೆಂದುಟಿಗಳಲ್ಲಿ ನಾ ಹಾಡುವ ಪದ್ಯವುಂಟು ಅರಬೀ ಸಮುದ್ರದಲ್ಲಿ ನಾನೇರುವ ನೌಕೆಯುಂಟು ವೈಶಾಖದ ಬಾನಿನಲ್ಲಿ ನಾ ಕಾಯುವ ತಾರೆಯುಂಟು ದಟ್ಟವಾದ ಕತ್ತಲಲ್ಲಿ ನಾ ಹುಟ್ಟಿದ ಗ್ರಾಮವುಂಟು ಯಾವುದಿಲ್ಲ ಯಾವುದುಂಟು ಎಲ್ಲ ನಂಟೂ ನನ್ನೊಳುಂಟು […]

#ಅರ್ಥಶಾಸ್ತ್ರ

ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್‍ಯಗಳು

0

೧.೬ ಸಾರಾಂಶ ೧. ಹಣದ ಆವಿಷ್ಕಾರಕ್ಕೂ ಮೊದಲು ವಸ್ತುವಿನಿಮಯ ವ್ಯವಸ್ಥೆ ಅನುಷ್ಠಾನದಲ್ಲಿತ್ತು. ಸರಕುಗಳಿಗೆ ಬದಲಾಗಿ ಸರಕುಗಳನ್ನು ಮತ್ತು ಸೇವೆಗಳಿಗೆ ಬದಲಾಗಿ ಸೇವೆಗಳನ್ನು ವಿನಿಮಯ ಮಾಡುವ ವ್ಯವಸ್ಥೆಯದು. ೨. ವಸ್ತು ವಿನಿಮಯ ವ್ಯವಸ್ಥೆಯ ದೋಷಗಳಿಂದಾಗಿ ಹಣದ ಆವಿಷ್ಕಾರವಾಯಿತು. ಅದಕ್ಕೂ ಮೊದಲು ಸ್ತ್ರೀಯರನ್ನು, ಗುಲಾಮರನ್ನು, ಸಾಕುಪ್ರಾಣಿಗಳನ್ನು, ದವಸಧಾನ್ಯಗಳನ್ನು, ತಪ್ಪಳ, ಚರ್ಮ, ಆನೆದಂತ, ತಂಬಾಕು, ಚಾಹುಡಿ, ಹರಳುಕಲ್ಲು, ಉಪ್ಪು ಇತ್ಯಾದಿಗಳನ್ನು […]

#ಅನುವಾದ

ನಿಜ ಒತ್ತಾಯಮಾಡುತ್ತದೆ

0

ನಾವು ಇದನ್ನೂ ಹೇಳಬೇಕೆಂದು ನಿಜ ಒತ್ತಾಯ ಮಾಡುತ್ತದೆ : ‘ಬದುಕು ಸಾಗುತ್ತದೆ.’ ಕ್ಯಾನೆ, ಬೊರೊಡಿನೋಗಳಲ್ಲಿ ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ ಬದುಕು ಸಾಗುತ್ತದೆ. ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ ಒಂದು ಪೆಟ್ರೋಲ್ ಬಂಕಿದೆ, ಬಿಲಾಹೊರಾದ ಪಾರ್ಕಿನ ಬೆಂಚಿಗೆ ಬಳಿದ ಬಣ್ಣಹಸಿಯಾಗಿದೆ. ಪರ್ಲ್ ಹಾರ್ಬರಿನಿಂದ ಹೇಸ್ಟಿಂಗ್ಸ್ ಗೆ ಪತ್ರಗಳು ರವಾನೆಯಾಗುತ್ತವೆ, ಚೆರೊನಿಯಾದ ಸಿಂಹ ಪ್ರತಿಮೆಯ ಮುಂದೆ ವ್ಯಾನು ಸಾಗುತ್ತದೆ, ವೆರ್ಡನ್‍ನ […]