
ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ...
ನಿನ್ನದು ಆ ತೀರ – ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ ಒಲವ ಕಾತರ. ಮೌನದ...













