ಸಮರ್ಥನೆ : ಗಂಡ

ನಿನ್ನ ದಮ್ಮಯ್ಯ ತಪ್ಪು ತಿಳಿಕೋಬೇಡ ನನ್ನ ತಿಂದದ್ದೆ ತಿಂದು ಜಗಿದದ್ದೆ ಜಗಿದು ಬರುತಿದೆ ನನಗೆ ವಾಕರಿಕೆ ಅಷ್ಟೆ ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು ಅನ್ನ ಮೊಸರು - ನಾ ಹುಟ್ಟಿದಂದಿನಿಂದ ಮುಕ್ಕಿದ್ದು. ಬದುಕಬೇಕಲ್ಲ...

ಪಂದ್ಯ

ಮೈದಾನದೊಳಗೆಲ್ಲ ಕುದುರೆ, ಆಮೆ, ಒಂಟೆ ಎತ್ತು, ಆನೆ, ಮೊಲ ಇವುಗಳಿಗೆಲ್ಲಾ ರೇಸಂತೆ ಯಾರು ಯಾರನು ಸೋಲಿಸಿ ಮುಂದೆ ಹೋಗುವರೋ ಮುಂದ್ಹೋದವರ ತಳ್ಳಿ ಕಾಲೆಳೆದು ಬೀಳಿಸಿ ಮುಂದ್ಹೋಗುವರೋ ಅವರೆ ಅಂತೆ, ಗೆದ್ದವರು ಇಲ್ಲಿ ಗೆಲ್ಲುವವರಾರು ಕಾಲಿಡಿದು...