ಭಾವ ಜೀವ

ಭೋರ್ಗರೆದು ಬರಸೆಳೆದು ಬಿರುಸಿನಲಿ ಚಿಮ್ಮೆಸೆದು ಗಿರಗಿರನೆ ಸುರುಳಿಯಲಿ ಸೊರಗಿಸುವ ಸುಳಿಗಳಲಿ ಸಿಕ್ಕಿದಂತೊಮ್ಮೊಮ್ಮೆ ಹೃದಯ ಬಲು ತಪಿಸುವುದು! ನಭಕೇರಿ ಕೆಳಗುರುಳಿ ಭಾವಗಳ ಕಡಲಿನಲಿ ಮಿಂದು ಮೈ ಬೆಂಡಾಗಿ ಬಸವಳಿದು ಬೀಳುವುದು! ಮರು ನಿಮಿಷ ಮೆಲ್ಲೆಲರು ಮೃದು...

ಸ್ವತಂತ್ರ ಭಾರತ (ಆಗಸ್ಟ್ ೧೫-೧೯೪೭)

ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ|| ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ|| ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ, ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ; ತನ್ನ ತಾನು...

ಲಿಂಗಮ್ಮನ ವಚನಗಳು – ೫

ನೆನವುತ್ತಿದೆ ಮನ. ದುರ್ವಾಸನೆಗೆ ಹರಿವುತ್ತಿದೆ. ಕೊನೆಕೊಂಬೆಗೆ ಎಳೆವುತ್ತಿದೆ. ಕಟ್ಟಿಗೆ ನಿಲ್ಲದು- ಬಿಟ್ಟರೆ ಹೋಗದು. ತನ್ನ ಇಚ್ಫೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲ್ಲಿಸಿ, ಬಚ್ಚಬರಿಯ ಬೆಳಗಿನೊಳಗೆ ಓಲಾಡುವ ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯ ಅಪ್ಪಣಪ್ರಿಯ...

ಸಂಲಗ್ನ

ಸಮುದ್ರದಾಳಕ್ಕೆ ಇಳಿಯುತ್ತಿದ್ದಾಗಲೆಲ್ಲ ನನ್ನ ಆದರ್ಶದ ಮೌಲ್ಯಗಳು ಗಹಗಹಿಸಿ ನಕ್ಕು ತರಗೆಲೆಗಳಂತೆ ಮೇಲೆಯೇ ತೇಲುತ್ತವೆ. ಕೋರಲ್‌ಗಳಿಂದ ತರಚಿದ ಕಾಲು ಮಾಂಸ ರಕ್ತದ ಹನಿಗಳ ಸುತ್ತ ಸುತ್ತುತಲಿರುವ ಭಾವನೆಗಳ ಸೌಧದೊಳಗೆ ಕುಸಿದು ತಿರುಗಣಿಯ ಗುಂಡಿಯ ಸೆಳೆತಕ್ಕೆ ಸಿಗುವಾಗ...

ದಾರಿ ಬಿಡಿ

ಚಂದ್ರಪ್ನೋರೇ ಚಂದ್ರಪ್ನೋರೇ ದಾರಿ ಬಿಡಿ. ಇಂದ್ರಪ್ನೋರು ಹೇಳಿದಾರೆ ಭೂಮಿ ದೇವಿಗೆ ಸ್ನಾನ ಮಾಡ್ಸೋಕೆ ಸ್ನಾನ ಮುಗಿಯೋವರೆಗೂ ಮೋಡದ ಪರದೆ ಸರಿಸಿ ಇಲ್ಲಿ ಹಣಕಿ ನೋಡದೆ ಬೇರೆ ಎಲ್ಲಿಗಾದರೂ ಸ್ವಲ್ಪ ಗಾಡಿ ಬಿಡಿ. *****

ನಿಮ್ಮೊಡನಿದ್ದೂ ನಿಮ್ಮಂತಾಗದೇ ?

ಪ್ರಿಯ ಸಖಿ, ಬಾಹ್ಯಶಕ್ತಿಗಳು ಪ್ರಬಲ ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುವಾಗಲೆಲ್ಲಾ ನನಗೆ ನೆನಪಾಗುವುದು ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ‘ನಿಮ್ಮೊಡನಿದ್ದೂ ನಿಮ್ಮಂತಾಗದೇ’ ಎಂಬ ಕವನದ ಸಾಲುಗಳು. ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ...

ನಿನ್ನೊಲುಮೆ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚೆಂದ್ರಮುಖಿ ನೀನೆನಲು ತಪ್ಪೇನೆ ? ನಿನ್ನ ಸೌಜನ್ಯವೇ ದಾರಿನೆರಳಾಗಿರಲು ನಿತ್ಯಸುಖಿ ನೀನೆನಲು ಒಪ್ಪೇನೆ ? ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ ಚೆಲ್ಲಿಸೂಸುವ ಅಮೃತ ನೀನೇನೆ ! ನನ್ನ ಕನಸುಗಳೆಲ್ಲ ಕೈಗೊಳುವ...

ಹಳೆಯ ಹಾಡು

ಯಾವುದಾದರು ಒಂದು ಹಳೆಯ ಹಾಡೇ ಸಾಕು! ಹೊಸ ರಾಗ-ಹೊಸ ತಾಳ ಹೊಸಭಾವಗಳ ಮೇಳ ಯಾವುದೊಂದೂ ಬೇಡ. ಹೃದಯದೊಲವನು ಮೀಟಿ ಒಲವ ನೀರನ್ನು ತರಿಸಿ ಹೊಸ ರಾಗ-ಹೊಸ ತಾಳ ಹೊಸ ಭಾವಗಳ ಮೇಳ ಹಿಗ್ಗಿ ಹರಿಸುವ...

ಜ್ಞಾನದ ಮೊರೆ

ತಾರೆಗಳು ಶತಕೋಟಿ ಉದಿಸಿದರು ಬಾನಿನಲಿ, ಮೀರಿ ತೆರೆಗಳ ಧೀರ್ಘ ಆರ್ಭಟವೆ ಹೆಚ್ಚಿರಲಿ, ಶೂರ ಪುರುಷರು ಕಾಯದೊಳವಧಿಯನು ಮುಟ್ಟಿರಲಿ, ಸಾರ ಸಗ್ಗವು ತೋರ್ಪ ಸ್ತುತಿಹಲವು ಘೂರ್ಮಿಸಲಿ- ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ? ಧಾರೆಧಾರೆಗಳಾಗಿ ಜಗದಿ ನೆತ್ತರವೆ ಪ್ರಹಿಸಲಿ,...

ಒಂಟೆಗಳಿಗೆ ನಗುವೋ ನಗು

ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ ಕೊನೆ ಇರದ ದಾರಿ ಸತ್ತು ಹೋದ ಮಣ್ಣು ತಂಪು ಇಂಪಿಲ್ಲದ ಸಂಜೆಗೆ ಡೇರಿ ಹೂಡುವ ಯಾತ್ರಿಕರ ಬಿಡುಗಡೆಯಾಗುವ ಒಂಟೆಗಳ ಸಂಭ್ರಮ....