Month: October 2012

#ಕವಿತೆ

ಬಾಳೊಂದು ಶಾಸ್ತ್ರ ಹಾಳೋ

0

ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ                        |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ                     |ಅ.ಪ.| ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು ಕರ್ಬಲದ ಹೊಳಿಯು ಉಕ್ಕಿ ಬಲಿಯನೊಡ್ಡಿದ ಬ್ರಹ್ಮ ತಾಬೂತ ಕಲಿಯುಗದಿ ಕೌತುಕವಾಯಿತು ಹಲವು ಮಾತುಗಳ್ಯಾಕೋ ಶರಣರ ಛಲಕೆ ಒದಗಿತು ಶಾಹಿರತ್ ಕವಿ                  […]

#ಕವಿತೆ

ಸಾವಿನ ದ್ಯೋತಕ

0
Latest posts by ಮಂಜುನಾಥ ವಿ ಎಂ (see all)

  ಗೂಡು ಸೇರುವ ಹೊತ್ತು- ಪುಂಡ ಹುಂಜಗಳು ಪೈಪೋಟಿಗಿಳಿದು ತಮ್ಮ ಪಂಜಗಳಿಗೆ ಬಿಗಿದ ತುಂಡು ಚಾಕುಗಳಿಂದ ತಲೆ ಮತ್ತು ಹೃದಯಭಾಗ ಸೀಳಿಕೊಂಡು, ಚಿಮ್ಮುವ ನೆತ್ತರಿನ ಆವೇಶದಲಿ ಆಗಸದೆತ್ತರಕೆ ಜಿಗಿದು, ಕೆಂಡಗಳ ಸುಡುತ್ತಿವೆ. ಒಂದು ಡೈರಿಯಷ್ಟು ಪ್ರೇಮ ಕವಿತೆಗಳನ್ನು ಬರೆದು, ಶುದ್ಧ ಪೋಲಿ ಪ್ರೇಮಿ ಎನಿಸಿಕೊಳ್ಳುತ್ತಲೇ ಆ ಪುಟಗಳ ಚಿಟ್ಟೆಯೊಂದರ ಬೆನ್ನು ಬಿದ್ದಿದ್ದಳು. ಕೋಳಿ ಪಂದ್ಯದ ಜೂಜುಕೋರರು- […]

#ಜನಪದ

ಪಾಪಾಸಿನ ಗಂಡ

0
ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)

ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು. ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ ಯಾರೂ ಹೆಣ್ಣು ಕೊಡಲು ಒಪ್ಪಲಿಲ್ಲ. ಹಳ್ಳದಕೆರೆಯಾಯ್ತು, ಮತ್ತೊಂದು ಊರಾಯ್ತು ; ಮಗುದೊಂದು ಊರಾಯಿತು. ಮೂರು ಊರು ತಿರುವಿಹಾಕಿದರೂ ಹೆಣ್ಣು ಗಟ್ಟಿಯಾಗಲಿಲ್ಲ. […]

#ಕವಿತೆ

ನಾವಿಂದು ಮಾತಾಡಬೇಕಾಗಿರುವುದು

2
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ನಾವಿಂದು ಮಾತಾಡಬೇಕಾಗಿರುವುದು ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ. ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ ದಂತಗೋಪುರಗಳಲ್ಲಿ ಕುಳಿತು ಹೂವು-ಜೇನು, ನಾರಿ-ಸೀರೆ, ಇಂದ್ರ-ಚಂದ್ರರ, ಗಾಳಿಬುರುಡೆಯನ್ನಲ್ಲ ನೆಲಕಿಳಿಯದ ಭೂತ ಬೆಂತರಗಳೊಡನಲ್ಲ ಮಣ್ಣ ರುಚಿಕಾಣದ ಅಪ್ಸರೆಯರೊಡನಲ್ಲ ಇಹದಲ್ಲಿಳಿದುಬರದ ಪರದ ಪರದಾಟವನ್ನಲ್ಲ ಮಾತಾಡಲು ಮಾತೇ ಬೇಕೇನು? ಬಾಯೆಂಬ […]

#ಕವಿತೆ

ಕೊರೆತದ ನಂತರ

0

ನಿಮ್ಮ ಜೀವನ ಎಂಥ ಕಷ್ಟಗಳ ಸರಮಾಲೆ ಎನ್ನುವುದು ನನಗೀಗ ಗೊತ್ತಾಯಿತು ಅದಕ್ಕೆ ಸರಿಸಮನಾಗಿ ಕಣ್ಣೀರು ಸುರಿಯುವುದಕ್ಕೆ ನನಗೀಗ ಟೈಮಿಲ್ಲ ಹೊತ್ತಾಯಿತು *****

#ಹನಿಗವನ

ಒಂದೇ ಪರಿಣಾಮ

0

ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ *****  

#ಅಣಕ

ಅಧಿಕಾರ ಕೈನಲ್ಲಿದ್ದಿದ್ದರೆ ರಾಮಮಂದಿರ ಎಂದೋ ಕಟ್ಟುತ್ತಿದ್ದೆ

0

ಘಟ್ಟದ ತಗ್ಗಿನ ಮಳೆ ಜಡಿಯಹತ್ತಿತ್ತು. ಮುರುಕಲು ಛತ್ರಿ ಹಿಡಿದು ಆಷ್ಟ ಮಠಗಳ ಕೋಟೆಗೆ ನುಗ್ಗಿ, ಪೇಜಾವರ ಯತಿವರ್ಯರ ಸಂದರ್ಶನ ಬಯಸಿ ಅವರ ದಿವಾನ್‌ಖಾನೆಗೆ ಅಡಿಯಿಟ್ಟೆ. ಹಿರಿಕಿರಿ ವಟುಗಳ ಮಧ್ಯೆ ಹಲಸಿನ ಹಪ್ಪಳ ಹುರಿಗಾಳು ಮೆಲ್ಲುತ್ತಾ ಯತಿಗಳು ವಿರಾಜಮಾನರಾಗಿದ್ದರು. ಧಡಾರನೆ ಅಡ್ಡ ಬೀಳದೆ ಕೈ ಜೋಡಿಸಿ ವಂದಿಸಿದ ಮಾತ್ರದಿಂದಲೇ ನನ್ನ ಪುರ್ವಾಪರವನ್ನು ಜ್ಞಾನಚಕ್ಷುಗಳಿಂದರಿತ ಯತಿಗಳು, `ಕುತ್ಕೊಳ್ಳಿ… ಪೇಪರ್ನವರೇನ್ರಿ?’ […]

#ಕವಿತೆ

ಗುರುತಿಸಬೇಕೋ ಪಕ್ಷಿಜಾತಿ

0

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ| ಅಡವೀಪಲ್ಲೆ ಮಡಿಯ ನೀರು ಒಡಲ ಒಳಗ ಸಲ್ಲಿಸಿಕೊಂಡು ಅಡವಿ ತಿರುಗುವವರ ಕೂಡ ದುಡುಕಿನಿಂದ ಹೋಗುವದು                                 |೧| ಒಂದು ಕಣ್ಣು ಒಂದು ನಾಲಿಗೆ ಬಾಯಿ ಎರಡು ಅದರ ದೇಹ ಮೂರು ಕಲ್ಲು ತಿಂಬುವದು ಮೋಡ ಮುಸುಕು ಗುಡುಗು ಸೇರಿ ಛಾಯ ಮಿ೦ಚು ಗಗನಕಡರಿ […]

#ಕವಿತೆ

ಏಪ್ರಿಲ್ ತಿಂಗಳ ಮೂರು ರಾತ್ರೆಗಳು

0
Latest posts by ಮಂಜುನಾಥ ವಿ ಎಂ (see all)

ಅವಳು ತನ್ನೆರಡೂ ಸ್ತನಗಳನ್ನು ಮುಚ್ಚಿಕೊಳ್ಳುತ್ತಾ, ಗಾಳಿಯಲೆಗಳಲ್ಲಿ ನಡೆಯತೊಡಗಿದ್ದಳು. ಬಟ್ಟೆಯಿದ್ದರೂ ಬೆತ್ತಲೆಯಲ್ಲಿದ್ದೇನೆ ಅಂದುಕೊಂಡವನ ಹಾಳುಭ್ರಮೆ ಮರದ ಹೂಎಲೆಗಳನ್ನು ಉದುರಿಸುತ್ತಿತ್ತು. ಉನ್ಮತ್ತ ಉಡುಪಿನ ಅವಳ ನಗೆ- ಕಿಟಕಿಯ ಮೂಲಕ ಹಾದುಬರುವ ಬಣ್ಣದ ಚಿಟ್ಟೆಗಳನ್ನು, ಹೆಣದ ವಾಸನೆಯನ್ನು ಹಿಮ್ಮೆಟ್ಟುತ್ತಾ ಅವನನ್ನೇ ಮುಗಿಸುವ ತವಕದಲ್ಲಿತ್ತು. ಉನ್ಮಾದ ರಾತ್ರೆಗಳನ್ನು ಶೋಧಿಸಿದ ಗಿಟಾರ್ ವಾದ್ಯ ಕತ್ತಲಗರ್ಭದಲ್ಲಿ ಕ್ರಿಯಾಶೀಲಗೊಂಡಿದ್ದು, ಬೆಳಕಿನ ಕಾಲದಲ್ಲಿ ಮದ್ಯ ಹೀರುತ್ತಾ ತನ್ನ […]

#ಸಣ್ಣ ಕಥೆ

ಅಳಮಂಡ ದೊಡ್ಡವ್ವ

0

ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ ಕುಮಾರಧಾರಾ ನದಿಯವರೆಗೆ ವಿಸ್ತರಿಸಿದ. ಅವನು ಬಲಿಷ್ಠವಾದ ಸೇನಾಪಡೆಯೊಂದನ್ನು ಕಟ್ಟಲು ಹಾಲೇರಿಯಲ್ಲಿ ಎಂಟು ದಿನಗಳಿಗೊಮ್ಮೆ ತೊಂಬರದೂಟವೆಂಬ ಭರ್ಜರಿ ಭೋಜನವನ್ನು ಏರ್ಪಡಿಸಿ ಅದಕ್ಕೆ ತರುಣರನ್ನು ಆಹ್ವಾನಿಸುತ್ತಿದ್ದ. ಅವರಲ್ಲಿ ಬಲಿಷ್ಠರನ್ನು ಆಯ್ದು ಪಡೆಗೆ […]