ಹನಿಗವನ

ಮನುಜರು

ಮನುಜರು ಎರಡು ರೀತಿ ಕೆಲವರು ದುಂಬಿಗಳು ಹೂವ ಹಾಸಿಗೆಯಲ್ಲಿ ಹುಡುಕುತ್ತಾರೆ ಜೇನು ಕೆಲವರು ಹಂದಿಗಳು ಕೊಳಚೆ ಹೇಸಿಗೆಯಲಿ ಹುಡುಕುತ್ತಾರೆ ಬರಿ ಹೇನು *****  

ಮನೆ ಗಂಟೆ

ಆಫೀಸಿನಲ್ಲಿ ಬೇಕಿಲ್ಲ ಗೋಡೆಗೆ ಗಡಿಯಾರ ತೂಕಡಿಕೆ, ಆಕಳಿಕೆ ನಿಮಿಷಕೆ ಎಷ್ಟು ಬಾರಿ ಎಂದು ಗುಣಿಸಿದರೆ ಸಾಕು ಸಿಕ್ಕೀತು ಮನೆಗೆ ಧಾವಿಸುವ ಗಂಟೆ *****  

ಕೀಲಿ ಕೈ

ನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. […]