ಉರುಬುವ ಹವ್ಯಾಸ ಬಿಡಿ

Published on :

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ ಜೊಲ್ಲಿನ ತುಂತುರು ಬೀಳುತ್ತದೆ. ತಮ್ಮದೇ ಆಹಾರವನ್ನು ತಾವು ಉರುಬಿಕೊಂಡರೆ ಪರವಾಗಿಲ್ಲ. ಆದರೆ ಎಷ್ಟೋ […]

ಆಕಾಶದೊಳಗೆ

Published on :

ನಮ್ಮ ಮೇಲೆ ನೀಲವರ್ಣದಲ್ಲಿ ಕಾಣುವ ಆಕಾಶವು ಅಸಂಖ್ಯಾತ ಗ್ರಹಗಳನ್ನು, ನಕ್ಷತ್ರಗಳನ್ನು ಒಳಗೊಂಡಿದ್ದು ಬರಿಗಣ್ಣಿಗೆ ಕಾಣದಷ್ಟು ದೂರದಲ್ಲಿದೆ. ಆಕಾಶಗಂಗೆಯಲ್ಲಿ ಒಂದು ಸಾವಿರ ಕೋಟಿ ಸೂರ್ಯಗ್ರಹಗಳಿವೆ. ಅನೇಕ ಸೂರ್ಯಗ್ರಹಗಳು ಸೇರಿ ಬ್ರಹ್ಮಾಂಡವಾಗಿದೆ. ಇವುಗಳೊಡನೆ ನಮ್ಮ ಸೂರ್ಯನಂತೆಯೇ ಸೌರಪರಿವಾರವು ಇದೆ. ನಮ್ಮ ಸೂರ್ಯ ತನ್ನ ಪರಿವಾರದೊಡನೆ ಆಕಾಶಗಂಗಾ ಕೇಂದ್ರದ ಒಂದು ಸುತ್ತು ಸುತ್ತಲು ೨೨.೫ ಕೋಟಿ ವರ್ಷಗಳು ಬೇಕಾಗುತ್ತದೆಂದು ಖಗೋಳ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸಾಧಾರಣ ಅಂದಾಜಿನ ಪ್ರಕಾರ ಆಕಾಶಗಂಗೆಯಂತಹ ಹೆಚ್ಚು ಕಡಿಮೆ ೧೦ ಅರಬ್ […]

ಮಹಾಮಾರಿ ರೋಗ – ಏಡ್ಸ್

Published on :

ಏಡ್ಸ್ ವೈರಸ್ ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ.  ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು.  ಆದರೆ ಪ್ಯಾಶ್ಚರ್‍ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್ರೊ. ಎಲ್. ಮೊಂಟೆಗ್ನೇರ್‍ ಮತ್ತು ಸಹಪಾಠಿಗಳು ೧೯೮೩ ರಲ್ಲಿ ಏಡ್ಸ್‌ಗೆ ಕಾರಣವೆಂದು ತೋರಿಸಿಕೊಟ್ಟರು.  ಎಚ್.ಅಯ್.ವಿ ಯಲ್ಲಿ ಎಚ್.ಅಯ್.ವಿ-೨ ಎಂದು ಎರಡು ಪ್ರಕಾರಗಳಿವೆ.  ಅದರ ಆಕಾರ ಹೀಗಿದೆ. ಏಡ್ಸ್‌ಗೆ ಮದ್ದು? ಏಡ್ಸ್‌ ರೋಗಕ್ಕೆ ಇದೂವರೆಗೆ ಯಾವುದೇ […]

ಹೃದಯಾಫಾತ ತಪ್ಪಿಸುವ ಔಷಧಿ

Published on :

ಪ್ರತಿದಿನವೂ ಹೃದಯಾಘಾತದಿಂದ ಸಾವನ್ನಪ್ಪುವ ಜನಸಂಖ್ಯೆ ಹೆಚ್ಚಾಗುತ್ತಲಿದೆ. ಸ್ವಸ್ತವಾಗಿದ್ದಾಗಲೇ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ನಿಂತು ನೆಲಕ್ಕೆ ಕುಸಿದು ಪ್ರಾಣ ಹಾರಿಹೋಗಿರುತ್ತದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಡಾ|| ಹೆರಾಲ್ಡ್ ಲೇಜರ್ ಅವರು ಒಂದು ಪ್ರೊಟೀನನ್ನು ಜೈವಿಕ ತಂತ್ರಜ್ಞಾನದಿಂದ ಕಂಡು ಹಿಡಿದಿದ್ದಾರೆ. ಜೈವಿಕ ತಂತ್ರಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟ ಮತ್ತು ಉನ್ನತ ಉಪಕಾರಿಯಾದಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಲಾಭಕಾರಿಯಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಮ್ಯುಸಾಬೂಟ್ಸ್ ವಿಶ್ವವಿದ್ಯಾನಿಲಯದ ಡಾ|| ಲೇಜರ್ ಅವರು ಹೃದಯಾಘಾತವನ್ನು ತಡೆಗಟ್ಟಲು […]

ಆಮ್ಲ ಮಳೆ

Published on :

ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ ಸುರಿಯುವ ಆಮ್ಲ ಮಳೆಯ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ. ಈ ದಿನಗಳಲ್ಲಿ ದಿನಕ್ಕೊಂದು ಕಾರ್ಖಾನೆ ತಲೆಯೆತ್ತುತ್ತಿದೆ.  ಇವುಗಳ ಜೀವಾಳ ಕಲ್ಲಿದ್ದಲು ಮತ್ತು ತೈಲ ಅನಿಲಗಳು.  ಈ ಉದ್ಯಮಗಳು ಹೊರ ಚೆಲ್ಲುವ ರಾಸಾಯನಿಕ ವಸ್ತುಗಳು, ರಾಸಾಯನಿಕ ಇಂಧನಗಳನ್ನು […]

ಡಿಜಿಟಲ್ ಟಿ.ವಿ.ಗಳು ‌

Published on :

ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ. ಸತತವಾಗಿ ರೆಡಿಚಿತ್ರಗಳನ್ನು ಪ್ರದರ್ಶಿಸಬಲ್ಲದು. ಡಿಜಿಟಲ್ ಡಿಕೋಡನ್ನು ಜೋಡಿಸಿದಾಗ ವ್ರಸಾರವಾಗುವ ಸ್ವರೂಪ (ಫಾರ್ಮಟ್) ಏನೇ ಇದ್ದರೂ ೪೮೦ ಪೃಥಕ್ಕಣಗಳನ್ನು ಪ್ರದರ್ಶಿಸಬಲ್ಲದು. ಏಕೆಂದರೆ ಸೆಟ್ ಟಾಪ್ ಪೆಟ್ಟಿಗೆ H.D.T.V (ಹೈಡೆಫನಿಷನ್) ಸಂಕೇತಗಳನ್ನು ೪೮೦ ಪಿ.ಗೆ ತಿರುಗಿಸಬಲ್ಲದು. ಆದರೆ […]

ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

Published on :

‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯನ್ನು ಯಾರೂ ಅಲ್ಲಗಳೆಯಲಾರರು.  ಈ ಭಾಗ್ಯವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ.  ಉಚಿತಾನುಚಿತಗಳನ್ನು ಅರಿತು ಸಕಾಲದಲ್ಲಿ ಸೇವಿಸುವ ಶುಚಿರುಚಿಯ ಆಹಾರವು ನಮ್ಮ ಆರೋಗ್ಯಪಾಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಇದು ಸಾಮಾನ್ಯ ಅಭಿಪ್ರಾಯ ಮಾತ್ರವಲ್ಲದೇ ವೈದ್ಯಕೀಯ ಅಭಿಪ್ರಾಯವೂ ಹೌದು. ಒಳ್ಳೆಯ ಆಹಾರವೇ ಒಳ್ಳೆಯ ಜೀವನ.  ಒಳ್ಳೆಯ ಜೀವನವೇ ದೀರ್ಘಾಯುರಾರೋಗ್ಯವನ್ನು ಪ್ರಾಪ್ತ ಮಾಡಿಕೊಡುತ್ತದೆ.  ನಮ್ಮ […]

ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

Published on :

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ ಚಿಕಿತ್ಸೆಯನ್ನು ಮಾಡಿ ಪುನಃಕೂದಲು ಸಮೃದ್ಧಗೊಳ್ಳುವಂತೆ ಮಾಡಲು ಇನ್ನೂ ಪ್ರಯೋಗಗಳು ಆಗಿಲ್ಲ. ೫೦ ವರ್ಷದೊಳಗಿನ ಸ್ತ್ರೀ ಪುರುಷರಿಗೆ ಬೊಕ್ಕತಲೆಯಾದರೆ ಅಂಥವಹರಿಗೆ ಒಬ್ಬ ಸಾಮಾನ್ಯರು ಒಂದು ತೈಲವನ್ನು ಕಂಡು ಹಿಡಿದಿದ್ದಾರೆ. ಇದು ಇವರ ಇತ್ತೀಚಿನ ಶೋಧನೆ, ಮೇಲ್ನೋಟದಲ್ಲಿ […]

ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

Published on :

ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು ಹೆಚ್ಚು ರುಚಿಯಾಗಿ ಕಾಣಿಸುತ್ತದೆಂದು ಅವರ ಪ್ರಯೋಗಗಳಲ್ಲಿ ವ್ಯಕ್ತವಾಗಿದೆ. ವ್ಯಕ್ತಿಗಳು ಬೀರ್‍, ಕಾಫಿ, ಚಹಾ, ವಿಸ್ಕಿ ಇಂಥ ವಿವಿಧ ಪೇಯಗಳನ್ನು ಸೇವಿಸುತ್ತಿರುವಾಗ ನಾದೋತ್ಪಕ ಯಂತ್ರದಿಂದ ವಿವಿಧ ಆವರ್ತನ ಪ್ರಮಾಣಗಳ ಧ್ವನಿಗಳನ್ನು ಹೊರಡಿಸಿದರೆ ಆ ವಿಶಿಷ್ಠ ಆವರ್ತನದ […]

ಸ್ಮಾರ್ಟ್ ಫೋನ್‌ಗಳು

Published on :

ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ ಇದು ಸಂಪರ್ಕ ಮತ್ತು ಸಂಘಟನೆ ಎರಡನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿದೆ. ಅಮೇರಿಕಾ ಸೇರಿದಂತೆ ಯೂರೋಪಿನ ಹಲವಾರು ರಾಷ್ಟ್ರಗಳ ಗಮನ ಸೆಳೆಯಲು ವಿಫಲವಾದರೂ ಇದರ ಕಲ್ಪನೆ ಮಾತ್ರ ಅದ್ಭುತಪಾದದ್ದು ಈಗಾಗಲೇ ಸೆಲ್ಯೂಲರ್ ಫೋನ್ ವಿಶ್ವವಿಖ್ಯಾತಿಗಳಿಸಿರುವ […]