ಹನಿಗವನಚುನಾವಣೆಸಸ್ಯ ರಾಶಿಯು ಪ್ರತಿ ಹೇಮಂತ ಋತು ಮಾನದಲ್ಲು ಹಣ್ಣೆಲೆಗಳ ಮತದಾನ ಮಾಡಿ ದಕ್ಷ ವಸಂತ ರಾಜನನ್ನು ಚುನಾಯಿಸಿಕೊಳ್ಳುತ್ತವೆ *****...ಜರಗನಹಳ್ಳಿ ಶಿವಶಂಕರ್July 19, 2020 Read More
ಹನಿಗವನಸಂಬಂಧಇಳೆಗು ಮಳೆಗು ಮದುವೆ ಕಣ್ಮರೆಯಾದರೆ ಮಳೆ ಇಳೆ ವಿಧವೆ *****...ಜರಗನಹಳ್ಳಿ ಶಿವಶಂಕರ್July 12, 2020 Read More
ಹನಿಗವನಸುಧಾರಣೆಹೊಂಗೆ ಬೇವು ನಿಂಬೆ ಮಾವು ತುಂಬೆ ಹೂವು ಯಾವುದಾದರೇನು ದುಂಬಿಗಳ ಬಾಯಲ್ಲಿ ಬೆರೆತರೆ ಎಲ್ಲವೂ ಸವಿ ಜೇನು *****...ಜರಗನಹಳ್ಳಿ ಶಿವಶಂಕರ್July 5, 2020 Read More
ಹನಿಗವನಅಂತರಾಳಬೇಲಿಯ ಮೇಲಿನ ಬಡಕಲು ಬಳ್ಳಿಗಳು ಬಿರಿದು ಹೂಗಳು ಹಡೆದವು ಸೋರೆ ಕುಂಬಳ ಬೆರಗಾಗಿ ಕೊರಗಿ ಬಾಡಿ ಉದುರಿದವು ಬೀಗಿ ನಗುತ್ತಿದ್ದ ಸಂಪಿಗೆ ದಾಸವಾಳ *****...ಜರಗನಹಳ್ಳಿ ಶಿವಶಂಕರ್June 28, 2020 Read More
ಹನಿಗವನಉಳಿಕೆಗಿಡ ನನ್ನದು ಮರ ನನ್ನದು ತೋಟ ತೋಪು ಕಾಡು ನನ್ನದು ಎಂದವರ ಕೈಗೆ ಹಿಡಿಯಲು ಸಿಕ್ಕಿದ್ದು ಕೊನೆಗೆ ಒಂದು ಸಣ್ಣ ಊರುಗೋಲು *****...ಜರಗನಹಳ್ಳಿ ಶಿವಶಂಕರ್June 21, 2020 Read More
ಹನಿಗವನಬೆಳೆಮನವ ಮಣ್ಣ ಮಾಡಿ ಭಕ್ತಿಯ ಬೀಜ ಬಿತ್ತಿ ನಂಬುಗೆಯ ಮಳೆಗರೆದರೆ ಮರವಾಗಿ ಫಲಿಸಿತ್ತು ನೋಡಾ ಮುಕ್ತಿ *****...ಜರಗನಹಳ್ಳಿ ಶಿವಶಂಕರ್June 14, 2020 Read More
ಹನಿಗವನಆಶಯಬೇಲಿ ಭ್ರಮಿಸುತ್ತೆ ಬೇರ್ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು *****...ಜರಗನಹಳ್ಳಿ ಶಿವಶಂಕರ್June 7, 2020 Read More
ಹನಿಗವನಪರಿಣಾಮಹೊಲಸು ನೀರು ಹರಿವ ಕಡೆ ಹಲಸು ಹಣ್ಣಾಗಿ ಊರಿಗೆ ತುಂಬಿತು ಪರಿಮಳ ಗಂಗೆ ತುಂಗೆ ಕಾವೇರಿ ಮಿಂದು ಬಂದರು ಕಳೆದು ಹೋಗಲಿಲ್ಲ ಮನದ ಮಡಿ ಮೈಲಿಗೆ ಆಚಾರ ವಿಚಾರ *****...ಜರಗನಹಳ್ಳಿ ಶಿವಶಂಕರ್May 31, 2020 Read More
ಹನಿಗವನಕರುಣೆಎಲ್ಲ ಕಾಳುಗಳಲ್ಲಿ ಇರುವುದಿಲ್ಲ ಎಣ್ಣೆ ಎಲ್ಲ ಹಾಲುಗಳಲ್ಲಿ ಬರುವುದಿಲ್ಲ ಬೆಣ್ಣೆ ಹಾಗೆ ಎಲ್ಲ ನೋಟಗಳ ಹಿಂದೆ ಇರುವುದಿಲ್ಲ ಕರುಣೆ *****...ಜರಗನಹಳ್ಳಿ ಶಿವಶಂಕರ್May 24, 2020 Read More
ಹನಿಗವನಅಗತ್ಯಹೆಮ್ಮರದಿಂದ ಕೆತ್ತಿದ ಬುಗುರಿ ತಿರುಗಲುಬೇಕು ಸಣ್ಣ ಹತ್ತಿಯ ಗಿಡದ ಹೊಸೆದ ಹುರಿ *****...ಜರಗನಹಳ್ಳಿ ಶಿವಶಂಕರ್May 17, 2020 Read More