
ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ಕೊರಗಿ ಕೊರಗಿ ಮರುಗುವೆ ಏಕೆ? ಹಸಿರ ನೆಲದಾಗ ನೇಸರ ಬಾಳಿನಗಲ ಜೀವ ಜೀವಕೆ ಬೇಸರ ಏಕೆ? ನೀ ಯಾಕೆ ಹಿಂಗ್ಯಾಕೆ? ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ ನೇಸರ ಬಾಳಿನಗಲ ಪ್ರಕೃತಿ ನನ್ನೆಲ್ಲ ಅಂಗಾಂ...
ಬಾಗಿಲ ತೆರೆದು ಹೊಂಬೆಳಕನ್ನು ಚೆಲ್ಲುತಲಿ ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ || ತಳಿರು ತೋರಣ ನಗೆಯ ಬೀರುತಲಿ ಇಗೋ ಬಂತು ಯುಗಾದಿ ನವ ಚೈತನ್ಯ ತುಂಬಿ ಬಾಳಿಗ || ಬೇವಾಗಿರಲು ಭಾವನೆಯು ಬೆಲ್ಲವಾಗಿರಲು ಸ್ನೇಹವು ಬೇವು ಬೆಲ್ಲ ಸವಿದರೆಲ್ಲ ಬೆರೆತ...
ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ|| ಬಿಳಿ ಮುಗಿಲ ಹಾರ...
ಬೆಳಗುತ ಬಂದಿತು ದೀವಿಗೆ ಹರುಷವ ತಂದಿತು ಬಾಳಿಗೆ ಕತ್ತಲನು ಓಡಿಸಿ ಮತ್ತೆ ಹಸನಾಗಿ ಬೆಳಕಾಗಿ ಬಂದೇ ಬಂದಿತು ಬಾಳಿಗೆ || ಬದುಕಿನ ಹಾದಿಯಲಿ ಸಂಬಂಧಗಳ ನಗೆಬೀರಲು ಚಿನಕುರುಳಿ ಹೂಬಾಣಗಳ ಹೂಡಿತು ದೀವಿಗೆ || ಅಂಬರದಲಿ ಅಪ್ಸರೆಯರ ಆಹ್ವಾನ ಚುಕ್ಕಿ ಚಂದ್...
ಪುಟಿದೇಳುವ ರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಸದ್ವಿಚಾರ ತಾಳದಗಲ ಮಾನಭಿಮಾನದಿಂ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಕಲೆಯದನುರಾಗಲ...
ಬರಲಿಲ್ಲ ನನ್ನವ ಬರಲಿಲ್ಲ ಏಕವ್ವ ಬರದೇ ಕಾಡುವನೇಕೆ ಬರಿದಾಗಿದೆ ಎನ್ನ ಮನವು ಅರಿಯನೇಕೆ ಅವ || ಸೊಬಗಿಲ್ಲ ಗೆಲುವಿಲ್ಲ ಒಲವಿಲ್ಲ ನೆಲವಿಲ್ಲ ಕಣ್ತುಂಬಿ ನಿಂದು ಸೆರೆಯಾಗಿದೆ ಮನ ಕಾಣದಿಹನೇಕೆ ಅವ || ಕನಸಲ್ಲಿ ನನಸಲ್ಲಿ ವಿರಹದಾ ನೋವಲ್ಲಿ ಸರಸ ಸಲ್ಲಾ...
ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ ನಮ್ಮ ಹಿರಿಯೂರಿಗೆ ನಮ್ಮ ಸಿರಿಯೂರಿಗೆ ತಂದಾನಿ ತಾನಿ ತಂದಾನೋ ||…. ಹಿರಿಯೂರ ನಡುಕಟ್ಟು ಬೇಲೂರ ಗೆಜ್ಜೆತಟ್ಟು ಸಿರಿಯೂರ ಬಾಗ್ಲತಗ್ದು ನಮ್ಮ ಸಿರಿಯೂರ ಬೆಳಗೌನೆ ಮೈಲಾರಯ್ಯ || ತಂದಾನಿ || ಮೈಲಾರಯ್ಯ ಬೆನ್...
ಎಂದಾದರೊಂದು ದಿನ ಬರುವೆ ಏನೆ ಕೇಳಲೇ ಬಾಗಿಲ ತೆರೆದು ಬೆಳಕನ್ನು ನೀಡಿ ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ || ಹೊಸಿಲ ಮೆಟ್ಟಿ ಬರಲು ನನ್ನರಸಿಯೆ ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ ಹೊಂಗಿರಣವು ನ...
ನಗುವಿನಲಿ ನೋವಿದೆ ನೋವಿನಲಿ ನಗುವಿದೆ ಅತ್ತರಾಫಾತ ನಗುವೇ ಚೇತನ || ಅಳುವೇ ಜನನ ಮರಣ ನಗುವೆ ಜೀವನ ಭಾವನ ಬದುಕಿನಾಟವೆ ಈ ಸ್ಪಂದನ || ನಗುಮೊಗ್ಗಿನ ಬಾಲ್ಯ ಒಲವು ಬಿರಿದ ಯೌವನ ಒಲವಿನಾಟಕೇ ಬೆಸದ ಹೂರಣ || ನಗೆ ಚಿಮ್ಮಿದಾಟ ತೊಟ್ಟಿಲು ತೊಟ್ಟಿಲಾಟ ಒಡ...
ಅಮ್ಮ ನಿನ್ನ ಕೈ ತುತ್ತು ತಿನ್ನೋ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಹಕ್ಕಿ ಗೂಡು ಸೇರಿ ಮುದ್ದು ಮರಿಗೆ ಗುಟುಕು ಹಾಕುವ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಅಂಬೆಗಾಲ ಇಟ್ಟ ಕಂದ ಅಮ್ಮನ ಮಡಿಲ ಸೇರಿ ನಲಿವ ಹೊತ್ತು ಸ್ವರ್ಗದ ಬಾಗಿಲ...








