ಬಾಗಿಲ ತೆರೆದು
ಹೊಂಬೆಳಕನ್ನು ಚೆಲ್ಲುತಲಿ
ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ ||

ತಳಿರು ತೋರಣ ನಗೆಯ ಬೀರುತಲಿ
ಇಗೋ ಬಂತು ಯುಗಾದಿ
ನವ ಚೈತನ್ಯ ತುಂಬಿ ಬಾಳಿಗ ||

ಬೇವಾಗಿರಲು ಭಾವನೆಯು
ಬೆಲ್ಲವಾಗಿರಲು ಸ್ನೇಹವು
ಬೇವು ಬೆಲ್ಲ ಸವಿದರೆಲ್ಲ
ಬೆರೆತ ಭಾವ ಚೈತನ್ಯವು ||

ಹೊಸ ದಿಗಂತ ಮೂಡಲಿ
ಋತುವು ಹೊಸತಾಗಲಿ
ಬೊಗಸೆ ತುಂಬಿದ ಹೊಸ ಚೇತನಕೆ
ಹೊಸ ರಾಗದ ಹೊಸತಿಗೆ ||

ಹಸಿದ ಹೊಟ್ಟೆಯ ಕೂಗಿಗೆ
ಹೊಸತಾದ ಕಣ್ ನೋಟಕೆ
ಹೊಸತಾಗಿ ಬರಲಿ ಯುಗಾದಿ
ಗುಡಿಸಲಂಗದ ರೂಪಕ ||
*****

Latest posts by ಹಂಸಾ ಆರ್‍ (see all)