ಮಾಸಲು ಸೀರೆ

ವಿರಕ್ತ ಲೋಕದ ಅಸಂಬದ್ಧ ಉಲಿತ ಉಳಿಯಿಂದ ತೂತು ಕೊರೆದಂತೆ ಖಾಲಿಯಾದ ನೇತ್ರದ್ವಯಗಳು ಪರಾಂಬರಿಸಿ ದೃಷ್ಟಿಯಿಟ್ಟರಷ್ಟೇ ದೃಶ್ಯ. ಸೀಳುನೋಟ ಬೀರುತ್ತಿದ್ದಾಳೆ ಆಕೆ ಬಾಗಿದ ಬೆನ್ನು ಸಹಕರಿಸುತ್ತಿಲ್ಲ, ಒಮ್ಮೆಲೆ ತಡಕಾಡುತ್ತಾಳೆ, ಜಾರಿದ ಚಾಳೀಸು ಜಾಗಕ್ಕೇರಿಸಲು: ನಿರ್ಜೀವ ಬಿಳಿಕೂದಲುಗಳು...

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು ಇಣುಕುತ್ತಿವೆ ಗದ್ದೆ ಗುಳ್ಳೆಗಳು ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ ಹದುಳಿಂದ ಪಾದ ಊರುತ್ತ, ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ...

ಕಾಡುತ್ತವೆ ನೆನಪು

ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ ತನ್ನ ಕಾಡಿದ ಅದೇ ಬಾಲ್ಯದ ನೋವು ಇವರ ಕಾಡದಿರಲಿ ಎಂದು. ಕಾಡುತ್ತವೆ ನೆನಪು ನಿನ್ನೆ ನೆನೆಯಿಟ್ಟ ಕಾಳುಗಳು ಇಂದು...

ಆಸೆ

ನನ್ನ ಕನಸಿನ ಮೊಗ್ಗು ಬಾಡಿ ಹೋಗುವ ಮುನ್ನ ಕಟ್ಟಬೇಕಿದೆ ಮಾಲೆ ಪೋಣಿಸಿಟ್ಟು ಬದುಕ ಹಾಡಿನ ಭ್ರಮರ ಹಾರಿ ಹೋಗುವ ಮುನ್ನ ಬರೆಯಬೇಕಿದೆ ಸಾಲು ಕೂಡಿಸಿಟ್ಟು ಜೀವ ಜ್ಯೋತಿಯ ಎಣ್ಣೆ ತೀರಿಹೋಗುವ ಮುನ್ನ ಹೊಸೆಯಬೇಕಿದೆ ಬತ್ತಿ...

ಮಳೆ ಮತ್ತು ಮಗು

ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ...

ಗೌಣ

ಮಾಮರದ ಚಿಗುರಲ್ಲಿ ರಾಗ ಮೂಡಿಸೋ ಪಿಕವೇ ಮಧುರ ನುಡಿಯಲಿ ನಿನ್ನ ರೂಪ ಗೌಣ ಸಿಹಿಯ ಸತ್ವದ ಹೊತ್ತ ಕರಿಯ ನೇರಳೆ ಹಣ್ಣೆ ರುಚಿಯ ನೆಪದಲ್ಲಿ ನಿನ್ನ ಬಣ್ಣ ಗೌಣ ಮೂರ್ತಿಯಾಗಲು ಬಲ್ಲ ಕರಿಯ ಕಲ್ಲಿನ...

ಕಾಲನ ಕರೆ

ಅತಿ ಜರೂರು ಕರೆ ಓಗೊಟ್ಟು ನಡೆಯಲೇ ಬೇಕು ದೂಡಲಾಗದು ಮುಂದೆ ಹೇಳಲಾಗದು ನೂರು ನೆಪ ಅವ ದೂರ್ತನೆಂದರೂ ಬದುಕಿಗೆ ಬಾರದಿರೆ ಸಾಕೆಂದರೂ ದುತ್ತೆಂದು ಹೆಗಲೇರಿ ತಳ್ಳಿ ಬಿಡುವ ಕೂಪಕ್ಕೆ ಮುಗ್ಧ ಎಸಳುಗಳ ಕೂಡ ಕೊಚ್ಚಿ...

ಗೆಳತಿ

ಏಕೆ ಗೆಳತಿ ಮನಬಾಗಿಲವರೆಗೂ ಬಂದುತಟ್ಟಿ ಕರೆಯಲಿಲ್ಲನಿನ್ನ ಭಾವನೆಗಳೇಕೆನನ್ನವರೆಗೂ ಮುಟ್ಟಲೇ ಇಲ್ಲನನಗೂ ಇತ್ತಲ್ಲ ಆಸೆನಿನ್ನಂತೆ ಗೆಳತಿಯಾಗಿ ಬಂದವಳುಪ್ರೇಮಿಯಾಗಿ ಬರಲೆಂದುಜೀವನಕೆ ಜೊತೆಯಾಗಲೆಂದೆಅದಕ್ಕೇಕೆ ತಣ್ಣೀರನ್ನೆರೆಚಿದೆ?ಕಡೆತನಕ ಬಗೆಗೊಡುಹೊಗೆಗೂಡಾಗಲೆಂದೇ? ಬಣ್ಣದ ಚಿತ್ತಾರ ಬಿಡಿಸಹೊರಟಾಗ ಕಪ್ಪು ಮಸಿಚೆಲ್ಲಿ ಕಲೆಯಾಯಿತೆ? ವ್ಯಥೆ ಬೇಡ ಗೆಳತಿನವ್ಯ...

ಅಪವ್ಯಯ

ಕುಲಬಂಧು ಕೆಲದಲ್ಲೇ ಪರದೇಶಿಯಾಗುವನು ಬದುಕಿದ್ದು ನಿಷ್ಕ್ರೀಯನು ಜಡ ದೇಹದೊಡೆಯನು ಹಗಲಿರುಳು ಮಲಗಿರಲು ಸಾಧನೆಯು ಹೇಗೆ? ಗಾಳಿ ಗೋಪುರ ಕಟ್ಟಿ ಮನಸಲ್ಲೇ ಮೆಲ್ಲೆ ಗೂಡಂಗಡಿಯ ಕಟ್ಟೆ ಹಾದಿ ಬೀದಿಯ ಚಿಟ್ಟೆ ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ...

ವಿಧಿ ಬರಹ

ಸದ್ದು ಗದ್ದಲದ ಒಳಗೆಕದ್ದು ಕುಳಿತಂತೆನೆನೆನೆನೆದು ಹೊಸಬಾಳಕನಸ ಹೆಣೆದಳು ಆಕೆ ನೆಚ್ಚು ನೂಪುರದಲ್ಲಿಕೆಚ್ಚು ಕಾಮನೆಯಲ್ಲಿತೊಳೆದ ಮುತ್ತಿನ ಹಾಗೆ ಹೊಳೆದಳಾಕೆ ನಾಳೆ ನಾಳೆಯ ನೆನೆದುಕಲ್ಪನಾ ವಿಲಾಸ ಮೆರೆದುಹುಚ್ಚುಗುದುರೆಯ ಹತ್ತಿ ಹೊರಟಳಾಕೆ ಮಾತು ಮಾತಿಗೂ ಲಜ್ಜೆಕಣ್ಣ ನೋಟವು ಕದ್ದೆಒನಪು...