
ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ ಹೆಸರಾಗ ದೇವಕಿ ಬಸರಾದ್ರ ಬಾಣೆಯ...
ನಿನ್ನ ಒಂದು ನೋಟ ಸಾಕು ಕೋಟಿ ಜನ್ಮ ಸಾರ್ಥಕಾ ನಿನ್ನ ಒಂದು ನಗೆಯು ಸಾಕು ಕಷ್ಟ ಕೋಟಿ ಚೂರ್ಣಕಾ ||೧|| ನೀನೆ ನೀನು ಕಾಮಧೇನು ಪುಂಗಿ ನಾದ ಪವನಪಂ ನೀನೆ ಕಂಪು ತಂಪು ಇಂಪು ಸೊಂಪು ಸುಮನ ಸೋಮಪಂ ||೨|| ಲಲನೆ ಲಲನೆ ಚಲನೆ ಚಲನೆ ಹಲಲ ಹಲಲ ಹಲ್ಲಣ್ಣ ನೀನ...
ಬಂಗರ ಚಂದ್ರಾ ಮುಗಿಲಾ ಇಂದ್ರಾ ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ|| ಚಂಚಂದಾಗಿ ಆಡ್ಯಾಡ್ಯಾಡ್ತಾ- ನನ್ನನ್ರಾಗ ಇಲ್ಲಾಗಿ ಹೋದ ಬಂದೇನೆಂದು ಬ್ಯಾಸತ್ತಾನು ಹೇಳೇಳ್ರಾಗ ಗಳ್ಳನೆ ಹೋದ ||೧|| ಕಂಡ್‍ಕಂಡಾನು ಕಲ್ಲಾಬಿಲ್ಲಿ ಹೌವ್ವವ್ವ...
ಆಹಾ ಬಂತು ಬಂತು ಹಬ್ಬ ನೀನು ಬಂದ ಗಳಿಗೆಗೆ ಒಹೋ ಬಂತು ಬಂತು ಹರುಷ ನೀನು ಕಂಡ ನಿಮಿಷಕೆ ||೧|| ನನ್ನ ಒಡೆಯ ನಲ್ಲ ರಾಯ ಯುಗದ ಕೂಗು ಕೂಗಿದೆ ಜಗದ ನೊಗದ ನೂರು ಭಾರ ಚರಣ ತಲಕೆ ಬಾಗಿದೆ ||೨|| ನೀನೆ ಮೂಡು ನೀನೆ ಬೆಳಗು ನೀನೇ ಹಿರಿಯ ಪ್ರೇರಣಾ ನೀನೆ ಜ...
ಜೋಗತಿ ನಾನು ಬೀಗತಿ ಕಾಡತಿ ಯಾಕ ನೋಡತಿ ||ಪ|| ತುರುಬೀನ ಸಿಂಬ್ಯಾಗ ಬಿಂದೀಗಿ ನಾನಿಟ್ಟೆ ತುಂಬೀದ ಮಂದ್ಯಾಗ ಕುಣದೇನ ವಾರೀಗಿ ಗೆಳತೇರು ಛೀಮಾರಿ ಹಾಕ್ಯಾರ ಬೀದೀಯ ಬಸವೆಂದ್ರು ಬಂದೇನ ||೧|| ಇಲಕಲ್ಲ ಸೀರ್‍ಯಾಗ ಬೀಸೀದ ತೋರ್ಮುತ್ತ ಪಕ್ಕಂತ ಹಾರೀತ ಪರ...
ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು ದಾಟಿ ಹಿಗ್ಗಿ ಹಿಗ್ಗಿ ನಿಂದವು ||೨|| ಯಾರು ಏನು ಎಂಬ ಚಿಂತೆ ಓಡಿ ಓ...
ಹನುಮಂತಣ್ಣಾ ಶನಿವಾರಣ್ಣಾ ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ| ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್ ಯಾಕೆ ಹಾಯ್ ಹಾಯ್ ಅಂತಾರೆ ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್ ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧|| ದೇವ್ರೇ ಇಲ್ಲಾ ಅಂದಾ ಜಾನಿ ಜಾಯ್ಲ...
ಬಾರೆ ತಾರೆ ಚಂದ್ರ ನೀರೆ ಮುಗಿಲ ಮಂಚ ಕರೆದಿದೆ ನೂರು ನೂರು ಚುಕ್ಕೆ ಹೂವು ಎದೆಯ ಕಮಲ ತೆರೆದಿದೆ ||೧|| ಕುಣಿವುದೊಂದೆ ಗೊತ್ತು ನನಗೆ ಹೊತ್ತು ಗೊತ್ತು ಕಿತ್ತೆನೆ ಗೆಜ್ಜೆ ಝಣಣ ಹೆಜ್ಜೆ ಝನನ ಪ್ರೇಮ ಪೈಜೆ ಕುಣಿದೆನೆ ||೨|| ಕುಚದ ಕುತನಿ ಕಚದ ಕಮನಿ ...
ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ ತ್ವಾಟಕ್ಕ ಮಕಮಾರಿ ಬಲುಸುದ್ದ ಉದ್ದುದ್ದ ತೆಂಗಾ ಮುಗಿಲುದ್ದೊ ಬಾಳ್ಯಾಗ...
ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...







