
ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ ನಿನ್ನ ರೂಪವು ಬಂದು, ಕಳೆದ ಕಾಲದ ನನಸ ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ! ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ, ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು, ಮರೆಯಾದ ನಿನಗಾಗಿ ತವಕಪಡುತೆ! ಅಂದೊಮ್ಮೆ,...
ನೋಡು ಉಷೆ! ಸುತ್ತೆಲ್ಲ ಬೆಡಗು ಸೂಸಿದೆ ತುಂಬಿ, ಚಂದ್ರಮನ ಎಳಗಿರಣಗಳ ತೋಳತೆಕ್ಕೆಯಲಿ ಮುದ್ದು ಮೋಡವು ನಕ್ಕು ನಲಿಯುತಿರೆ, ಮರಿದುಂಬಿ ಹೂಹೃದಯದೊಲವಿನಲಿ ಕುಣಿದಾಡುವಂದದಲಿ! ತಂಗಾಳಿ ಮರದೆಲೆಯ ಮುಟ್ಟಿಯೂ ಮುಟ್ಟದೊಲು, ಮೃದುವಾಗಿ ಮುತ್ತಿಟ್ಟು, ಮುಂದ...
ದಾರಿಯು ಇನಿತಾದರು ಕಳೆದಿಲ್ಲ, ದೂರದ ಊರಿನ ಸುಳಿವೇ ಇಲ್ಲ, ಹಸುರು ಬಯಲುಗಳೊ ಬಾಳಿನೊಳಿಲ್ಲ, ಇರುಳಾಗಲೆ ಕವಿದಿದೆ, ಗೆಳತಿ! ರವಿ ಮುಳುಗಿದನದೋ ದುಗುಡದ ಕಡಲಲಿ, ಮೋಡದ ದಿಬ್ಬಣ ಆಗಸದೊಡಲಲಿ ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ ಇರುಳಾಗಲೆ ಕವಿದಿದೆ, ...
ಆ ಕಾಲ ಅಳಿದಿಹುದು, ಮತ್ತೆ ಬಾರದು, ಮಗುವೆ. ಮುಳುಗಿಹುದು ಮಂಜಾಗಿ ಚಿರಕು ಅಳಿದಿಹುದು. ನಿನ್ನೆಯೆಡೆ ನೋಡುವೆವು ಎದೆಗೆಟ್ಟು ಕಾಣುವೆವು- ನಾನು ನೀನೂ ಕೂಡಿ- ಜೀವಕಾರ್ನದಿಯೊಳಗೆ ಕಂಡ ಕನಸಾಸೆಗಳ ಮುರುಕು ರೂಪಗಳು ಕಂಗೆಟ್ಟು, ಮಂಜಿಟ್ಟು ಮಸಕಿನಲಿ ಮು...
ಬಲು ಕಾಲ ಸುತ್ತುತಲಿ ಬಳಲಿದೆನು ಬಲು ದೂರ ಬಂದಿಹೆನು ಎಡಹಿದೆನು ಎನಿತೆನಿತೊ ದಾರಿಯಲಿ ಕೊನೆಗಿಲ್ಲಿ ನಿಂದಿಹೆನು! ನಾಳೆ ಬಾಳೆಂತಹುದೋ ಅರಿಯೆನದ ಇಂದೊಂದೆ ನಿಜವೆನಗೆ; ಅದನೆನಗೆ ತೋರಿಸುತ ಬೆಳಗಿಸಿದ ಉಷೆಯನ್ನ ಬಾಳ ನಗೆ! *****...
ಆ ನೋಟ! ಮೃದುಮಧುರ ನೋಟವೆಲ್ಲಿಹುದು? ಅಂದೊಮ್ಮೆ ಮಿಂಚಿದುದು ಅಲ್ಲೆ ಅಳಿದಿಹುದು ಹುಚ್ಚು ಕನಸಿನಲಾದರು ಮತ್ತೆ ಹೃದಯವ ಸೇರದು! ಮತ್ತೊಮ್ಮೆ ಪಡೆಯುವೆನೆ? – ಮತ್ತೆ ಬಾರದದು ಮೇಲ್ವಾಯ್ದ ಜ್ವಾಲೆಯೊಲು ಸಾಗಿ ಹೋಗಿಹುದು ! ಕಾಲನದಿ ಸಾಗುತಿರೆ ದಡ...
ಸಂಧ್ಯಾ ರಾಣಿಯು ಸುಂದರ ಸ್ವಾಗತ ನೀಡಿರಲದ ಕೈಕೊಳ್ಳಲು ಸರಿಯುತ ಉರಿಗಣ್ಣಿನ ರವಿ ಪಶ್ಚಿಮವರಸುತ ಕಾತರದಾತುರದಲಿ ಮುನ್ನಡೆದಿರೆ ಹಗಲಿದೊ ಮುಗಿಯುತ ಬಂತು! ಮನೆಯಲಿ ಮಡದಿಯು ಕಾದಿಹ ಕಾತರ ತೊದಲು ಕಂದರಾಲಿಂಗನದಾತುರ ಜನರೆದೆ ತುಂಬಿರೆ ದಾರಿಯ ಸರಸರ ತುಳ...
ಮದುವೆಯಾಯಿತು ಉಷೆಗೆ ಮಸಣ ಮಂಟಪದಲ್ಲಿ. ಕೇಳಲಿಲ್ಲವೆ ಊರು, ಜನರದರ ವೈಖರಿಯ? ವರನ ಬಳಗವು ಬಂದು ನಿಂತಿತ್ತು, ಅಲ್ಲಲ್ಲಿ ಹೆಜ್ಜೆ ಹೆಜ್ಜೆಗು ವಧುಗೆ ಕಾಲ ಕೂಡಿಟ್ಟುರೆಯ ಮೂಳೆಯಾಭರಣಗಳ ಬಳುವಳಿಯ ನೀಡುತ್ತ! ವಧುವಿನದು ಮೃದುಪಾದ ನೊಂದರಾಗದು ಎನುತ ನಾಲ...
ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು, ಚಂದಿರ ಮೋಡದ ಗೋರಿಯ ಪಡೆದ...








