
ಸೂರ್ಯ ದಿನ ಇಡೀ ಕಾಯ್ಸಿದ್ದನ್ನೆಲ್ಲ ತಂಪಾಗಿಸೋದು ಎಷ್ಟು ಕಷ್ಟದ ಕೆಲ್ಸ ಯಾರಿಗಾದ್ರೂ ಗೊತ್ತಾ. ಏನೋ ತಿಂಗಳಿಗೊಂದು ಅಮಾವಾಸ್ಯೆ ನಾನು ರಜ ಹಾಕಿದ್ರೆ ಅದಕ್ಯಾಕ್ರಿ ತಕರಾರು ಸೂರ್ಯನಿಗೆ ರಜವೂ ಬೇಕಿಲ್ಲ. ಮಜವೂ ಗೊತ್ತಿಲ್ಲ ಯಾಕೇಂದ್ರೆ ಯಾವಾಗಲೂ ಹೊತ...
ಬಿಸಿಗೆ ಬೆಣ್ಣೆ ಕರಗೋದು ಪ್ರಾಪಂಚಿಕ ಸತ್ಯ. ಆದರೆ ಬಿಸಿಯನ್ನೇ ಬೆಣ್ಣೆ ಮಾಡೋದು ನನ್ನ ಸಾಮರ್ಥ್ಯ. *****...
ಎಲ್ಲರೂ ಅವನನ್ನು ಸುತ್ತೋದ್ರಿಂದ್ಲೇ ಕಣ್ರೀ ಅವನಿಗಷ್ಟು ಪೊಗರು. ನಾನು ಆ ಕೆಲ್ಸ ಮಾಡ್ದೇ ಇದ್ದದ್ದರಿಂದಲೇ ನೋಡ್ರಿ ಉಳೀದಿರೋದು ನನಗೂ ಅಷ್ಟೋ ಇಷ್ಟೋ ಹೆಸರು. *****...
ಸ್ನಾನಕ್ಕೇಂತ ಬಂದ ಚಂದ್ರ ಸಮುದ್ರ ಕನ್ಯೆಯ ಕೋಣೇಲಿ ಅಡಗಿದನೆಂಬ ಗುಮಾನಿ ಕೇಳಿ, ಬೆಳಗಿನ ಜಾವದಲ್ಲಿ ತುರ್ತಾಗಿ ಬಲೆ ಕೊಟ್ಟು ಬೆಸ್ತರನ್ನಟ್ಟಿದ ಭೂಮಿಗೆ ಸಿಕ್ಕದ್ದು ಏನು? ಬರೀ ಒಂದಿಷ್ಟು ಮೀನು. *****...
ಹುಣ್ಣಿಮೆ ಚಂದ್ರನಿಗೆ ತಾರೆಯರು ಎಷ್ಟು ಕಣ್ಣು ಹೊಡೆದರೂ ಅವರು ಅವನ ಕಣ್ಣಿಗೇ ಬೀಳಲಿಲ್ಲ ಬೆಳ್ಳಿ ಬೆಳದಿಂಗಳ ಹಾಲಲ್ಲಿ ಬೆತ್ತಲೆ ಮೀಯುತ್ತಿದ್ದ ಭೂಮಿ ಮೇಲೆ ನೆಟ್ಟ ಅವನ ಕಣ್ಣು ಬೆಳಗಾಗುವವರೆಗೂ ಅತ್ತಿತ್ತ ಹೊರಳಲಿಲ್ಲ. *****...
ಹಗಲಿಡೀ ಹಾಳು ಮನುಷ್ಯರನ್ನು ಸುಧಾರಿಸಿ ಸುಸ್ತಾದ ಭೂಮಿ ರಾತ್ರಿ ಮತ್ತೆ ಚಂದ್ರ ಬಂದು ಕಾಡದಂತೆ ತಡೆಯೋದಕ್ಕೆ ಮೋಡಗಳ ಕಾವಲು ಹಾಕಿ ಹೋಗಿ ಮಲಗಿದ್ದಳು ಮುತ್ತಿಗೆ ಹಾಕಿದ ಮೋಡಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಚಂದ್ರ ಆಕಾಶದ ತುಂಬಾ ಸ್ಪೀಡಾಗಿ ಓಡ್ತಾ ಇದ್...
ಹದಿನೈದು ದಿನದಿಂದ ಕೊರಗಿ ಕೊರಗಿ ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ ಎಲ್ಲಿ ಮಂಗಮಾಯವಾದ? ತಾರೆಗಳಿಗೆ ದಿಗಿಲು ಪಾಪ ಹೋಗಿ ಹುಡುಕೋಣ ಅಂದರೆ ಅಮವಾಸ್ಯೆ ಕತ್ತಲು. *****...








