
ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು ಎನಿತೊ ಬೆಳ್ಳಕ್ಕಿಗಳನು ಸೃಷ್...
ಎಲ್ಲಿ ನೋಡಿದರು ಬಾಂಬು ಸ್ಫೋಟಗಳು ರಕ್ತ ಮಾಂಸ ನೆಣವು ಮುರಿದು ಬಿದ್ದ ಮನೆ ಮುರಿದ ಕಾಲು ಕೈ ಬಣವೆಗಳಲಿ ಹೆಣವು ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ ಒಳಗೆ ಎಂಥ ಕ್ರೂರ ನಾಗರಿಕತೆ ಹುಸಿ ವೇಷದೊಳಗೆ ರಕ್ಕಸರ ರಾಜ್ಯಭಾರ ಯಾವೊ ತೆವಲುಗಳು ಯಾವೊ ತೀಟೆಗಳು...
ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ ಕೊಟ್ಟಾಗ ಗಂಟು ಹಿಡಿದದ್ದೆ ಗಟ್ಟಿ...
ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ ಈ ಕಾಲದ ಕರಾಳ ಹಸ್ತ, ಈ ಇರುಳ ಕಾಳ ಕುಂತಳ ಲೋಕಗೆದ್ದ ಹಣ, ಹೆದರಿಸುವ ಹೆಣ ಈ ಹಗರಣ ಹಗಲು, ಒ...
ನಮ್ಮ ಮನೆ ಹೊತ್ತಿಕೊಂಡು ಉರಿಯುತ್ತಿದೆ ನೋಡಿರೊ! ಆದರೂ ನಮ್ಮದು ಭವ್ಯ ದಿವ್ಯ ಎಂದು ಭ್ರಮಿಸಿದ್ದೀರಿ ನಮ್ಮ ಜನ ಕ್ಷಯ ರೋಗಿಗಳಾಗಿದ್ದಾರೆ ಕಾಣಿರೋ! ಆದರೂ ನಾವು ಭೀಮ-ರಾಮಾರ್ಜುನರೆಂದು ನಂಬಿದ್ದೀರಿ ನಮ್ಮ ಕೋಣೆಗಳು ಕತ್ತಲ ಮಸಿ ಉಗುಳುತ್ತಿವೆಯಲ್ಲರೋ...







