ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು ಇಳೆಯಲ್ಲ’...

ಸುತ್ತೆಲ್ಲ ಹಸಿವಿನ ನಿಗೂಢ ಕರಿ ಮೌನ ಆವರಿಸಿ ಪಸರಿಸಿದೆ ಭೀತಿಯನು ಹಸಿ ನೆತ್ತರಲಿ ಕಲೆಸಿ ದೈನ್ಯತೆಯೇ ಮೈವೆತ್ತು ಬೇಡುತ್ತದೆ ರೊಟ್ಟಿ ‘ಪ್ರಭು ಆಕಾಶ ಬೇಡ ನನಗೆ ಅರಳಲು ಬಿಡು ನೆಲದ ನಗೆಗೆ’ *****...

ಹೇಗೆಂದು ಅಳೆವುದು ಈ ಹಾಳು ಹಸಿವನ್ನು ಒಮ್ಮೆ ಇತ್ತಿತ್ತ ಒಮ್ಮೆ ಅತ್ತತ್ತ ಅಳತೆಗೋಲುಗಳೇ ಪೊಳ್ಳು. ಲೆಕ್ಕವಿರದಷ್ಟು ರೊಟ್ಟಿ ತುಂಬಿಸಿದರೂ ಹಸಿವಿನ ತಕ್ಕಡಿ ತಟ್ಟೆ ಏರುವುದಿಲ್ಲ ತುಲಾಭಾರ ಮುಗಿಯುವುದಲ್ಲ. *****...

ಪರಸ್ಪರ ರೊಟ್ಟಿ ಹಸಿವುಗಳ ಅಂತರಂಗ ಅನಾವರಣಗೊಳದೇ ಅಪರೂಪದ ಸಮರಸವಿಲ್ಲ. ಮುಕ್ತಗೊಳದೇ ಅರಿವಿಲ್ಲ. ನದಿ ಮೌನವಾಗಿ ಹರಿಯುತ್ತದೆ ಎರಡೂ ದಡಗಳು ಸುಮ್ಮನೆ ಬಿದ್ದುಕೊಂಡಿರುತ್ತವೆ. *****...

ಹಸಿವು ಮಾತನಾಡುವಾಗ ರೊಟ್ಟಿ ಮೌನವಾಗಿದ್ದು ರೊಟ್ಟಿ ಮಾತನಾಡುವಾಗ ಹಸಿವು ಮೌನವಾಗಿದ್ದರೆ ಮಾತಿಗೂ ಮೌನಕ್ಕೂ ಬೆಲೆ ಪರಸ್ಪರ ಒಟ್ಟಾಗಿ ಗುದ್ದಾಡಿದರೆ ಮಾತು ಮೌನಗಳೇ ಅರ್ಥಹೀನ. *****...

ಹಸಿವಿನ ಮುಖವಾಡ ಮುಖವೇ ಎನಿಸುವಷ್ಟು ಸಹಜ ಕಲಾತ್ಮಕ, ಅವಿವೇಕಿ ರೊಟ್ಟಿಗೆ ಅರಿಯಲು ಆಗಿಯೇ ಇಲ್ಲ ಯಾವುದು ನಿಜ ಯಾವುದು ನಾಟಕ. ಹಸಿವಿನ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಕೇಳಿಯೇ ರೊಟ್ಟಿ ಮಂತ್ರಮುಗ್ಧ. *****...

ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ ಎಲ್ಲಿಗೂ ಹೊರಡುವುದಿಲ್ಲ ಅಳತೆಗಳ ಗೊಡವೆ ಇಲ್ಲ. ಹಸಿವೆಗೆ ಮಾತ್ರ ತಿರುತಿರುಗಿ ಅಳೆಯುವ ಕೆಲಸ. ಹುಡುಕುವ ಮೋಜು ಬೆಲೆ ಕಟ್ಟುವ ತುರ್ತು. *****...

ಪ್ರಿಯ ಸಖಿ, ಸಮಾಜವಾದಿಗಳನ್ನು ಸದಾ ಕಾಡುತ್ತಾ ಬಂದಿರುವ ವಿಷಯವೆಂದರೆ ಸಮಾಜ ಸುಧಾರಣೆಯನ್ನು ವ್ಯಕ್ತಿಯಿಂದ ಪ್ರಾರಂಭಿಸಬೇಕೋ, ಸಮುದಾಯದಿಂದ ಪ್ರಾರಂಭಿಸಬೇಕೋ ಎಂಬುದು. ಸಹಜವಾಗೇ ಇದಕ್ಕೆ ಪೂರ್ವಪರವಾದಗಳೂ ಇವೆ. ಸಮುದಾಯದಿಂದ ಸುಧಾರಣೆ ಆಗಬೇಕೆನ್ನುವ...

1...45678...34