
ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು. ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿದ್ದೇ ತಡ ಮೊಳಕೆಯೊಡೆದುಬಿಡುವುದೇ!? ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗ...
ಈ ಗೋಡೆಯಿಂದ ಆ ಗೋಡೆಗೆ ಕಪಾಟಿನಿಂದ ಷೋಕೇಸಿಗೆ ಮುಚ್ಚಿದ ಈ ಬಾಗಿಲಿನಿಂದ ತೆರೆಯದ ಆ ಕಿಟಕಿಯವರೆಗೆ ಹಾರಾಟ ವಿಹ್ವಲ ತುಡಿತ ಮನೆ ಹೊಕ್ಕ ಜೋಗಿಣಿ ಹಕ್ಕಿಯ ತಬ್ಬಲಿ ಅಲೆದಾಟ. ಸುತ್ತ ಸುತ್ತಿ ಸುಳಿದು ಒತ್ತಿ ಬಂದ ಕಂಪನ. ಜನ್ಮಾಂತರದ ಮೂಲ ಜಾಡು ತಡಕುತ್...
‘ಕವಿತೆ ಹುಟ್ಟಿತೇ?’ ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕು...
ಮುಚ್ಚಿದ ಗೂಡಿನ ಬಾಗಿಲು, ಬಾಗಿಲಿಲ್ಲದ ಬೀದಿ ನಡುವೆ ಲೋಕವ್ಯಾಪಾರಕ್ಕೆ ಸಾಕ್ಷಿ ಒಂದು ಅಬ್ಬೇಪಾರಿ ಹೊಸಿಲು. * ಅತ್ತ ಬಾಯ್ದೆರೆದು ಬಿದ್ದುಕೊಂಡಿರುವ ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ ಕ್ಷಣ ಕ್ಷಣವೂ ಮರುಳಾಗಿ ಬೀಳುವ ಅಸಂಖ್ಯ ಬಡಪಾಯಿ ಜೀವಗಳು ಚ...
ಈ ನೋವು ಸಪಾಟು ಬಯಲಿನಲಿ ತಣ್ಣಗೆ ಹರಿವ ನದಿಯಲ್ಲ ಸೂಜಿ ಕಣ್ಣಿನಲಿ ಬಳುಕುತ್ತಾ ಮೈಕೈ ನೆಗ್ಗಿಸಿ ಹಾದು ತೊಟ್ಟು ತೊಟ್ಟಾಗಿ ಆವರಿಸುತ್ತದೆ ಮಳೆ ನೀರು ಹನಿಹನಿಯಾಗಿ ಭೂಮಿಯಾಳಕ್ಕೆ ಇಳಿಯುತ್ತಾ ಒಳಗನ್ನೇ ಆವರಿಸಿದಂತೆ ಈ ತೇವ ಕೊನೆಗೀಗ ನೋವೆಂದರೆ̷...
ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ ಕರಗಿ ...
ಅಯ್ಯೋ…ನೋಡಲ್ಲಿ ಕಂದನನ್ನು ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ? ಮರಕ್ಕಾತು ಜಡವಾಗಿ ಕೂತಿದ್ದಕ್ಕೇ ಅವನನ್ನೇನು ಕೊರಡೆಂದುಕೊಂಡಿದೆಯೋ? ಕಾಲುಚಕ್ರ ಸೋತ ಹೊತ್ತಲ್ಲಿ ಮರಕ್ಕೊರಗುತ್ತಾನೆ ಕುಸಿದು ಅವನೊಂದಿಗೇ ಮರಕ್ಕೂ ಅದರ ಮೇಲಿನ ಸಕಲೆಂಟ...
ಅವ್ವಾ ಅವರು ಕತ್ತಿ ಮೊನೆ ಕೊರಳಿಗೆ ಚುಚ್ಚಿ ತಮಗೆ ಬೇಕೆನಿಸಿದ ನುಡಿ ಅರುಹಲು ಆಗ್ರಹಿಸುತ್ತಿದ್ದಾರೆ ಇವರು ನಾಲಿಗೆಗೇ ಭರ್ಜಿ ನೆಟ್ಟು ತಮಗೊಲ್ಲದ ನುಡಿ ಅರಳದಂತೆ ಕಡಿವಾಣ ಹಾಕಿದ್ದಾರೆ ಅವ್ವಾ…. ಎಂದಿಗೂ ನನ್ನ ನುಡಿಗಳಲ್ಲಿ ನನ್ನೊಳಗಿನ ನಾನ...








