ಗಿರಿಧರ ಪ್ರಿಯತಮನ

ಗಿರಿಧರ ಪ್ರಿಯತಮನ - ಶ್ರೀ ಪಾದಕೆ ಸಲ್ಲುವನೇ ಅವನೊಲವನು ಗೆಲ್ಲುವೆನೇ! ಚೆಲುವಿನ ಚಂದ್ರಮ ಇನಿಯ-ನಾ ಬೆರೆವೆನೆ ಆವನೊಳು ರಾತ್ರಿ; ನನ್ನನೆ ಮೀರಿ ಕ್ಟಷನ ಸೇರಿ ಮರೆವೆನೆ ಗಿರಿವನ ಧಾತ್ರಿ. ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ ಇತ್ತುದ...

ಪ್ರಿಯಾ ಪ್ರಿಯಾ ಎಂದು ಇನಿಯನ

ಪ್ರಿಯಾ ಪ್ರಿಯಾ ಎಂದು ನನ್ನ ಇನಿಯನ ಹೇಗೆ ನೀನು ಕರೆದೆ ಹೇಳು ಕೋಗಿಲೆ? ಹರಿಯು ನನ್ನ ಇನಿಯನೆಂದು ತಿಳಿಯದೆ? ಲಜ್ಜೆ ಬಿಟ್ಟು ನೀನು ಅವನ ಕರೆವುದೆ? ಕಿಚ್ಚು ಹಚ್ಚಬೇಡ ನನ್ನ ಹೃದಯಕೆ, ಉಪ್ಪ ಸುರಿಯಬೇಡ...

ನೀ ಸಿಗದೆ ಬಾಳೊಂದು ಬಾಳೆ?

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ ನಾ ತಾಳಲಾರೆ ಈ ವಿರಹತೃಷ್ಣಾ ಕಮಲವಿಲ್ಲದ ಕೆರೆ ನನ್ನ ಬಾಳು; ಚಂದ್ರ ಇಲ್ಲದ ರಾತ್ರಿ ಬೀಳು ಬೀಳು; ನೀ ಸಿಗದೆ ಉರಿ ಉರಿ ಕಳೆದೆ ಇರುಳ ಮಾತಿಲ್ಲ,...

ಎಲ್ಲಿ ಹೋಗಲೆ, ಹೇಗೆ ಕಾಣಲೆ?

ಎಲ್ಲಿ ಹೋಗಲೆ, ಹೇಗೆ ಕಾಣಲೆ ನನ್ನ ಗಿರಿಧರನ? ನನ್ನ ಬೀಡಿಗೆ ತಾನೆ ಬಂದು ಕಾದು ನಿಂತವನ ಹೇಗೆ ಕಾಣದೆ ಹೋದೆನೇ, ಹೇಗೆ ತರಲವನ? ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೇ, ಮತ್ತೆ ಬಾರನೆ ಸ್ವಾಮಿ...

ತೊರೆದು ಹೋಗದಿರೊ ಜೋಗಿ

ತೊರೆದು ಹೋಗದಿರೊ ಜೋಗಿ ಅಡಿಗೆರಗಿದ ಈ ದೀನಳ ಮರೆತು ಸಾಗುವ ಏಕೆ ವಿರಾಗಿ? ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷಯೆನಗೆ; ನಿನ್ನ ವಿರಹದಲೆ ಉರಿದು ಹೋಗಲೂ ಸಿದ್ಧಳಿರುವ ನನಗೆ. ಹೂಡುವೆ ಗಂಧದ ಚಿತೆಯ...

ನಾನೇ ಮಂಗ ಆಗಿದ್ರೆ

ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ ಬಿಳೀ ಮೋಡದ್ ಒಳಗೆ! ಇಲೀ ಗಿಲೀ...

ದೂರವಿರಲಿ ಪ್ರೇಮಿಸಿರುವ ಹೆಣ್ಣು

ದೂರವಿರಲಿ ಪ್ರೇಮಿಸಿರುವ ಹೆಣ್ಣು ದೂರವಿದ್ದರೇನೆ ಪ್ರೇಮ ಚೆನ್ನು, ತೀರಾ ಬಳಿ ಬಂದರೆ ತಡೆಯೇ ಇಲ್ಲ ಎಂದರೆ ಸುಟ್ಟು ಬಿಡುವ ಬೆಳಕೀಯುವ ಭಾನು. ಏನು ಚೆಲುವ ದೂರ ನಿಂತ ಚಂದಿರ! ಬರಿಗಣ್ಣಿಗೆ ತಂಬೆಳಕಿನ ಮಂದಿರ, ದುರ್ಬೀನಿನ...

ಯಾವ ಮಲ್ಲಿಗೆ ಕಂಪು?

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೪೭ ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು - ಬೆನ್ನೇರಿ ಹಾಯುತಿದೆ ಹೀಗೆ ಇಂದು? ಯಾವುದೋ ನೆನಪನ್ನು ಹೊತ್ತು,...

ನಾನೆಂಬ ಮಬ್ಬಿಳಿದು

ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ್ರಮೆ...

ಎಲ್ಲಿ ಹಾರಿತು ನನ್ನ ಮುದ್ದುಹಕ್ಕಿ?

ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ? ಕಣ್ಣು ತಪ್ಪಿಸಿ ಹಾರಿ ಬೇಲಿ ಸಾಲನು ಮೀರಿ ಅಡವಿ ಪಾಲಾಯಿತೋ ದಾರಿ ತಪ್ಪಿ! ಮನೆಯ ಕಾಳನು ತಿಂದು ಬೇಸರಾಗಿ ವನದ ತೆನೆಯನು...