
ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು? ಯಾವುದು ಈ ವಿಶ್ಚವ...
ನಮಿಸುವೆ ಈ ಚೋದ್ಯಕೆ ನಮಿಸುವೆ ಅಭೇದ್ಯ, ಮರಣ ಹರಣ ಚಕ್ರದಲ್ಲಿ ಸರಿವ ಕಿರಣಸಾರಕೆ. ಆಳ ನೆಲದ ಮರೆಯಲಿ ಹೆಳಲ ಬಿಚ್ಚಿ ಹುಡಿಯಲಿ, ಸಾರ ಹೀರಿ ಹೂವಿಗೆ ಕಳಿಸಿಕೊಡುವ ಬೇರಿಗೆ! ಮಳೆಯ ಇಳಿಸಿ ಮಣ್ಣಿಗೆ ಸವಿಯ ಮೊಳೆಸಿ ಹಣ್ಣಿಗೆ ನದಿಗಳನ್ನ ಕುಡಿಸಿಯೊ ಕಡಲ ...
ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ ಇದೆ, ಬುದ್ಧಿಯೆ ಅರಿವಿನ ಒ...
ಒಳಗೆ ಇಳಿದು ಬಾ ಇಳಿಯುವಂತೆ ನೀ ಮಳೆಯು ಮಣ್ಣ ತಳಕೆ ಕೆಸರ ಮಡಿಲಿಂದ ಕೆಂಪನೆ ಕಮಲವ ಮೇಲೆತ್ತುವ ಘನವೇ ಹೂವಿನ ಎದೆಯಲಿ ಬಗೆಬಗೆ ಪರಿಮಳ ಬಿತ್ತುವಂಥ ಮನವೇ ನಿಂತ ಗಿರಿಗಳಿಗೆ ನಡೆಯುವ ನದಿಗಳ ಕರುಣಿಸುವಾ ಒಲವೇ ಆನೆ ಅಳಿಲುಗಳ ಅಂತರವೆಣಿಸದೆ ತಾಳುವಂಥ ನ...
ನಾನು ನಾನು ಎಂಬ ಮಾಯೆ ಏಳುವುದೆಲ್ಲಿಂದ? ಎಲ್ಲವನೂ ಅಲ್ಲಾಡಿಸಿ ಹಾಯುವುದೆಲ್ಲಿಂದ? ಬುದ್ಧಿಯೇ ವಿದ್ಯೆಯೇ ಜೀವ ಹೊದ್ದ ನಿದ್ದೆಯೇ, ನೆಲ ಜಲ ಉರಿ ಗಾಳಿಯಿಂದ ಎದ್ದು ಬಂದ ಸುದ್ದಿಯೇ? ನಾನು ಎಂಬ ಹಮ್ಮಿಗೆ ತನ್ನದೆ ನೆಲೆ ಎಲ್ಲಿ? ಯಾವುದೊ ಬೆಳಕನು ಕನ್ನ...
ನನ್ನ ನಾನು ಪಡೆವುದೆಂದಿಗೆ ಹೂವು ಹಣ್ಣ ಬಿಡುವುದೆಂದಿಗೆ? ಹಣ್ಣು ಬಿರಿದು ಬೀಜವು ಬಿಂಬ ಸೀಳಿ ತೇಜವು ನಿಜ ರೂಪವ ಹಿಡಿವುದೆಂದಿಗೆ? ಭಾರಿ ದೂರ ನಡೆದೆ ನಿಲ್ಲದೆ ಸಾಲುಮರದ ಕರುಣೆ ಇಲ್ಲದೆ; ಕನಸಿನಿಂದ ಕನಸಿಗೆ ಹಾರಿ ದಣಿದ ಮನಸಿಗೆ ತಣಿಯಲೊಂದು ನೆಲೆಯ...
ಹೊತ್ತವರಾರೀ ಸೃಷ್ಟಿಯ ಭಾರ, ಎಳೆಯುವರಾರೀ ವಿಶ್ವದ ತೇರ, ಯಾವುದು ಕಾಣದೆ ಕುಣಿಸುವ ದಾರ? ಯಾರದು ಈ ಹುನ್ನಾರ? ಯಾರೋ ಜಗಕಾಧಾರ? ತಣ್ಣಗೆ ಬೀಸುವ ಗಾಳಿಯ ಮೇಲೆ ಬಣ್ಣದ ಹಗಲಿನ ಬೆಳಕಿನ ಮೇಲೆ ಸುಮ್ಮನೆ ಓಡುವ ತೊರೆಗಳ ಮೇಲೆ ಯಾರದು ಅಧಿಕಾರ? ಯಾರದು ಅಧಿ...
ಯಾರು ನಮ್ಮ ಕರೆದರು, ಕರೆದು ಎಲ್ಲಿ ಸರಿದರು? ನಾವು ಬರುವ ಮೊದಲೆ ನೂರು ಸೋಜಿಗಗಳ ಮೆರೆದರು? ಯಾರು ಬೆಳಕ ಸುರಿದರು ನದಿಗಳನ್ನು ತೆರೆದರು? ಆಕಾಶದ ಹಾಳೆಯಲ್ಲಿ ತಾರೆಗಳನು ಬರೆದರು? ಗಾಳಿಯಾಗಿ ಹರಿದರು ಬೆಂಕಿಯಾಗಿ ಉರಿದರು? ಕಡಲು ನೆಲವ ನುಂಗದಂತೆ ಯ...
ಬಾ ಸೌಭಾಗ್ಯವೆ ದಯಮಾಡು ಭಯಗಳ ದೂಡಿ ಮುದ ನೀಡು, ಒಡಲನು ಹೊರೆಯುವ ಭರದಲಿ ನಿನ್ನ ಮರೆತವನೆದೆಯಲಿ ಸ್ವರ ಹೂಡು, ಬಾಡದ ರೂಪವೆ ಬಳಿಸಾರು, ಹಾಡುವ ಗೀತವ ದನಿಯೇರು, ಕಾಣದೆ ಎಲ್ಲೋ ಮರೆಯಲಿ ನಿಂತು ಕಾಡುವ ಗುಟ್ಟೇ ಜೊತೆಗೂಡು ಮುಟ್ಟದ ಮೈಯೇ ಮುಖ ತೋರು ಕಟ...
ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು ಜೀವಕೂ ಒಂದೊಂದು ಕಣ್ಣ ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ ...







