
ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ ಬೀಸಲು, ಹೂರಾಶಿಯ ಹೊತ್ತಿವೆ ಪಥಕೆ ಹಾಸಲು, ಜಗದ ಹೃದಯ ಕುಣಿಸುವ ಋತುರಾ...
ಬಾ ಬಾ ಹೊಸಗಾಳಿಯೆ, ಹಳೆ ಬಾಳಿಗೆ ಬಾ ಒಣಗಿದೆಲೆಯ ಕಳಚಿ ನಿಂತ ಮೈಯ ತೂರಿ ಬಾ ಮಳೆಗಾಲದ ನವನೀರದ ಹರಸುವ೦ತೆ ಬಾ ಬತ್ತಿ ಹೊಲದ ಚಿತ್ತದಲ್ಲಿ ಜಲ ಚಿಮ್ಮಿಸು ಬಾ ಉದಾಸೀನ ಜೀವಹೀನವಾದುದೆಲ್ಲವೂ ಕೊನೆಯಿರುಳಿನ ಕಣ್ಣೀರಲಿ ಕೊಚ್ಚಿ ಹೋಗಲಿ; ಸೃಷ್ಟಿಶಕ್ತಿ ತ...
ಹಾಡುವ ಹಕ್ಕಿಗೆ ಹೂವಿನ ರೆಂಬೆ ಕಂದನ ಕೈಗೆ ಬಣ್ಣದ ಗೊಂಬೆ ಆಶೀರ್ವದಿಸಲಿ ಈ ಹೊಸ ವರ್ಷ ಪ್ರಾಯದ ಗಂಡಿಗೆ ಪ್ರೀತಿಯ ರಂಭೆ ಖಾಲಿ ಆಗಸಕೆ ಕಪ್ಪನೆ ಮೋಡ ಬೆಂದ ಜೀವಕೆ ಬೆಚ್ಚನೆ ಗೂಡ ಬಾಗಿನ ನೀಡಲಿ ಈ ಹೊಸ ವರ್ಷ ಕವಿ ಕಲ್ಪನೆಗೆ ಹೊಸ ಹೊಸ ಹಾಡ ನಲ್ಲಿಯ ಬಾ...
ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ ತಲೆಬಾಗಿ. ನಿನ್ನ ಹಜ್...
ಹೊಸ ಆಸೆಗೆ ಕಾರಣವೇ ಹೊಸ ಕಾಲದ ತೋರಣವೇ ಶುಭನಾಂದಿಗೆ ಪ್ರೇರಣವೇ ಹೊಸ ವರ್ಷವೆ ಬಾ, ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ. ಮಣ್ಣ ಸೀಳಿ ಏಳುವಂತೆ ಥಣ್ಣಗಿರುವ ಚಿಲುಮೆ, ಹಣ್ಣ ತುಂಬಿ ನಿಲ್ಲುವಂತೆ ರಸರೂಪದ ಒಲುಮೆ, ಹುಣ್ಣಿಮೆಯ ಶಾಂತಿಯನ್ನೆ ಹೃದಯದ...
ಕಾಯುತ್ತಿದೆ ಈ ನೀರವ ಗಗನ ಕಾಯುತ್ತಿದೆ ಗಿರಿ ನದಿ ಆವರಣ ಮಾಯಿಸಿ ಹಿಂದಿನ ನೋವು ನಿರಾಸೆಯ ಆಗುತ್ತಿದೆ ಹೊಸ ವರ್ಷಾಗಮನ ಇರುಳಲಿ ಎಷ್ಟೇ ನೊಂದರು ಜೀವ ತುಡಿಯದೆ ಕನಸಿಗೆ ಬೆಳಗಿನ ಝಾವ? ಸಾಗಿದ ವರ್ಷವೊ ನೀಗಿದ ಇರುಳು ಹೊಸ ಹಾಡಿಗೆ ಅಣಿಯಾಗಿದೆ ಕೊರಳು ...
ಹೊಸಿಲಲಿ ಬರೆದಿದೆ ಹೊಸ ಹಾರೈಕೆ ಹೂ ಬಿಸಿಲಿನ ಚಿತ್ತಾರದಲಿ, ನಿಜವಾಗಿಸು ಬಾ ನವವರ್ಷವೆ ನೀ ದಿನ ದಿನ ಪದ ವಿನ್ಯಾಸದಲಿ ಗಿಡಮರಬಳ್ಳಿಯ ಹೂಬಟ್ಟಲಲಿ ಭೃಂಗದ ಊಟದ ತಟ್ಟೆಯಲಿ ನಗುತಿದೆ ಚೆಲುವೇ ನಂದನದೊಲವೇ ಪರಿಮಳವಾಡುವ ತೊಟ್ಟಿಲಲಿ! ಬೇಸಿಗೆ ಮರಗಳ ಬೀಸ...
ವಧುವಿನಂತೆ ಕಾದಿದೆ ವರಣಮಾಲೆ ನೇದಿದೆ ನಿನ್ನ ವರಿಸಲೆಂದು ಲೋಕ ಕಾತರದಲಿ ಕಾದಿದೆ, ಬಾ ಬಾ ಹೊಸ ಕಾಲವೆ ಹೊಸ ಹಾಡಿಗೆ ತಾಳವೆ ಬಾಳ ಕುಣಿಸುವಂಥ ಗರವ ಬೀಳಿಸುವಾ ದಾಳವೆ! ಬಾ ಬಾ ಹೊಸವರ್ಷವೆ ವಧುಗೆ ವರನ ಸ್ಪರ್ಶವೆ, ಬೆಂದ ಮನಕೆ ಅನಂದವ ತಾ ಅಶಾವೃಷ್ಟಿಯ...
ಸ್ವಾಗತಿಸಿದೆ ಋತುರಾಜನನು ರಾಗನಿರತ ಲೋಕ ಕೋಗಿಲೆಗಳ ಸವಿಗೊರಲಿನಲಿ ರಾಗಿಣಿಯರ ನಗೆ ಹೊರಳಿನಲಿ ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ ಮೋದಭರಿತ ಸವಿಗಾನದಲಿ ದೂರದ ಇನಿಯಳ ಕನವರಿಸಿ ಮಾತು ಮಾತಿಗೂ ಪರಿತಪಿಸಿ ಕೊರಗುವ ವಿರಹಿಯ ತಾಪದಲಿ ಪ್ರೀತಿಗೆ ಎತ್ತಿದ...







