ಬೇಗನೆ ಬಾ ಚೈತ್ರನೇ
ಕಾದಿರುವೆವು ನಿನಗೆ
ತೋರೋ ಶ್ರೀಮುಖವ
ಮಾಗಿ ಕೊರೆದ ಇಳೆಗೆ
ಮರಮರವೂ ಬರೆಸಿದೆ
ಸನ್ಮಾನದ ಪತ್ರ,
ಹೂ ತುಂಬಿದ ಕೊಂಬೆಗಳೋ
ಹಕ್ಕಿಗಳಿಗೆ ಛತ್ರ;
ಕೂಗುತ್ತಿವೆ ಕೋಗಿಲೆ
ಓಲಗದನಿಯಾಗಿ,
ಕಾಯುತ್ತಿದೆ ಬರವನು
ಜಗವೇ ತಲೆಬಾಗಿ.
ನಿನ್ನ ಹಜ್ಜೆ ಸೋಕಿತೋ
ಮರಮರಕೂ ಉಸಿರು,
ಉಸಿರಾಡುತ ಓಲಾಡುವ
ಪ್ರತಿರೆಂಬೆಯು ಹಸಿರು,
ತುಂಬುವುದೋ ಮಕರಂದ
ಹೂವಿನ ದೊನ್ನೆಯಲಿ,
ಕುಡಿದ ದುಂಬಿ ಹರಸುವುವೊ
ಫಲವ ಮರದ ತುಂಬ.
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕೃಷ್ಣಭಕ್ತರ ಕುಣಿತ - April 15, 2021
- ಸೀನಿಯರ್ ಕ್ರಿಕೆಟಿಗನ ಸಂಜೆ - April 8, 2021
- ಅರ್ಧಸತ್ಯದ ಪ್ರಾಪ್ತಿ - April 1, 2021