
ಹೇಳೂನು ಬಾರೋ ಸವಾಲಿನ ಆಕ್ಷರಾ ||ಪ|| ಕಾಳ ಕರ್ಬಲದೊಳು ಖೇಲ ಖೇಲ ಖೇಲ ನಾಳೆ ಶಹಾದತ್ತ ಪಂಜ ತಾಬೂತ ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ ||೧|| ಲಾಡಿ ತಗದು ಚಲ್ಲಿ ಬೇಡಿಕೊಂಡಾಡೊ ಮವಲ್ಲಿ ||೨|| ನೋ...
ಹಾಡಬ್ಯಾಡ ನಡಿ ಹಾಡಿ ದಣಿದ್ಯೋ ಖೋಡಿ ||ಪ|| ರೂಢಿಪ ಶಾರಮದೀನದ ಪತಿಗಳು ಜೋಡಿಲೆ ಶಾಹಿರ ಕೂಡಲೊಲ್ಲದು ರಣ ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ ||೧|| ಬುದ್ಧಿಗೇಡಿ ನಮ್ಮಲ್ಲಿದ್ದೊಬ್ಬ ಹುಡುಗನು ಕದ್ದು ಪುಸ್ತಕವ ಕೂಡಲು ತಿದ್ದಿ ತಿದ...
ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ ಪಾಡ ಕಾಣೋದಿಲ್ಲೋ ಸಮರಾ ಐಸುರಾ ||ಪ|| ಕವಿತ ಮಾಡುವದು ಮೂಲಸ್ಥಾನದಲಿ ತಿಳಿಯಲೋ ತಿಳಿದ್ಹೇಳಲೋ ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ ||೧|| ಅಂಗವನರಿಯದೆ ರಂಗಿಲೆ ಹಾಡುವದು ಸಂಗನೇ ಮುದಿ...
ಕೋನ್ ಬನಾಯೆ ಚೆ ಅಲಾವಾ ಕೋನ್ ಬನಾಯೆ ||ಪ|| ಹಸನೈನ ಶಹಾದತ್ತ ದೀನಕಾ ಜಂಗ ಹೋ ಕರ್ಬಲಮೆ ||೧|| ಐಸುರ ಮೋರುಮ ದೋನೋ ಅಗ್ನಿ ಪರದೇಶ ದೇಶಪರದೇಶ ಅಲಾವಾ ||೨|| ಆಯೆ ಜಾಲಿಮ ಚಾಯೆ ಹಮ್ ಪರ ಕೋಯ ಕೋಯರು ಹಾಜ್ಯಾತ ಅಲಾವಾ ||೩|| ನಪ...
ಬೋಕಿ ಒಳಗ ಮೂರು ಲೋಕ ಹುಟ್ಟಿತು ಆ ಕುಲ ಈ ಕುಲ ಎಲ್ಲಿತ್ತೋ || ಪ || ಜೋಕಿಲೆ ಹದಿನೆಂಟು ಚಾತಿಗೆ ಹೇಳತೇನಿ ಏಕಮುಂಡಗಿ ಮಾತಿದು ಗೊತ್ತೋ || ಆ. ಪ. || ಬಲ್ಲವರಾದರೆ ತಿಳಿದು ಹೇಳರಿ ಮುಲ್ಲಾನ ಮಸೀದಿ ಎಲ್ಲಿತ್ತೋ ಗುಲ್ಲಮಾಡಿ ಗುದ್ದ್ಯಾಟದಲಾವಿಗೆ ಬೆ...
ಬ್ಯಾಸರಾದಿತೊ ಹೇಸಿ ಕವಿ ಹಾಡುವದೈಸುರವೋ ||ಪ|| ದೇಶ ತಿರುಗಿ ನೀ ತಂದ ರಿವಾಯತ ಆಸರದೊಳು ಹಾಳ ಹರಟಿ ||೧|| ತಾಳವಿಲ್ಲದ ಮ್ಯಾಳ ಕಟ್ಟಿ ಫಲವೇನು ತ್ವಾಳಹೋಗಿ ಹುಲಿನುಂಗಿ ನೀರಾಟದಿ ಲೋಲ್ಯಾಡುವ ಹಾಳ ಹರಟಿ ...
ಕಾಡೋಳಾಯ್ತು ಅಲಾವಿಯಾಡಿದರಾರೋ ನಾಡೊಳಗ ಐಸುರ ನೋಡಿದರಾರೋ ||ಪ|| ಪಂಜ ತಾಬೂತ ಪೂಜೆಮಾಡಿದರಾರೋ ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ ||೧|| ಒಂದ ಕುಡಕಿಯೊಳು ಹಣಹಾಕಿದರಾರೋ ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ ||೨||...
ಅಲಾವಿಗೆ ಐಸೂರ‍್ಯಾತಕೋ ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ ||೨|| ಬಣ್ಣದ ಲಾಡಿಯ ಹಾಕಿ ಮೆರೆಯುವ ಜನ ಪುಣ್ಯ ಪ...
ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ ಕದನ ಬೆಳಸಿತ್ತರಿ ಕರ್ಬಲ ಜವದಿನ ||ಪ|| ಗುದ್ದಲಿ ಹಾಕುವರೇನು ಈ ನೆಲಕ ಸಧ್ಯಕೆ ತಡವ ಮಾಡುವದು ಇನ್ನ್ಯಾಕೋ ||೧|| ಡೋಲಿ ಕಟ್ಟುವರೇನು ಕಾರಣ ಡೋಲ್ಯಾಗ ದೇವರಿಡುವರೇನು ಕಾರಣ !|೨|| ಫಕ್ಕೀರರಾಗುವ...
ಹತ್ತು ದಿವಸದಾಕಾರ ಮೊಹೋರುಮ ಗೊತ್ತನರಿಯದಾದರೆ ಕತ್ತೆ |ಪ| ಮತ್ತೆ ಬೊಗಳುವಾ ಶ್ವಾನಕವಿ ಯಾ- ವತ್ತು ರಿವಯತು ಹೇಳುತಿಹ |ಅ-ಪ.| ಮೇದಿನಿಯೊಳು ಬೈದಾಡೋ ಸವಾಲೊಂದು ಹೋದ ವರುಷ ಹೇಳಿದಿ ಬಂದು ವಾದ ಬಿಡೋ ಈ ವರುಷ ಐಸುರ...







