ಹಾಡಬ್ಯಾಡ ನಡಿ ಹಾಡಿ ದಣಿದ್ಯೋ ಖೋಡಿ      ||ಪ||

ರೂಢಿಪ ಶಾರಮದೀನದ ಪತಿಗಳು
ಜೋಡಿಲೆ ಶಾಹಿರ ಕೂಡಲೊಲ್ಲದು ರಣ
ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ            ||೧||

ಬುದ್ಧಿಗೇಡಿ ನಮ್ಮಲ್ಲಿದ್ದೊಬ್ಬ ಹುಡುಗನು
ಕದ್ದು ಪುಸ್ತಕವ ಕೂಡಲು ತಿದ್ದಿ ತಿದ್ದಿ ಅದನ
ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ            ||೨||

ಓಣಿ ಉಪ್ಪಿನ ಚೀಲ ಮಾರುವ ಮಾಣೆರ
ಕ್ಷೋಣಿಯೊಳು ಶಿಶುನಾಳಧೀಶನ ಮಂಂದೆ ನಿಂತು
ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ           ||೩||

*****