ಅಗೊ ಅಗೊ ಬಂದ ಓ ಹೊತ್ತಗೆಯನೆ ತಂದ! ನಾಚುತ ನಿಂದ “ಬಿಡುವಿಹುದೇ?” ಎಂದ. ಬಿಡುವಿಲ್ಲದೆ ಏನು?- ಇದು ಈತನ ಜಾಣು. ಬಾ ಇನ್ನೇನು, ಆಡಿಸು ಗೋಣು. ಕಟತಟಕಟವೆನುತ ಏನೀ ನುಡಿಸಿಡಿತ! ಇದೆ ಈತನ ಬೆರಗು, ಎನ್ನ ಯ ಕೊರಗು. “ಚೆನ್ನ ವೆ ಎಂತು?”...

ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****...

ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...

ಒಂದೂರಿನಲ್ಲಿ ಒಬ್ಬರಸಿದ್ದ ಅವನುಡುಪೆಂದರೆ ಬಹು ಪ್ರಸಿದ್ದ. ಒಮ್ಮೆಗೆ ಓಲಗದೊಳು ಕುಳಿತಿರಲು ಬಂದೆರೆಡೆಗೆ ಇಬ್ಬರು ದರ್ಜಿಗಳು, “ಕಂಡೂ ಕಾಣದ ತೆರ ನವಿರಾಗಿಹ ಗಾಳಿಗು ಆಕಾಶಕು ತೆಳುವಾಗಿಹ ಸೋಜಿಗದುಡುಪನು ಹೊಲಿಯುವೆ”ವೆಂದು ಆಣೆಯನಿಟ್ಟರು ಎಲ...

(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ ಮಿಕ್ಕಿಹೆಯಲ್ಲೇ ...

(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ...

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು ...

ಬಾ ಬಾ ಮೋಹನೆ-ಬೇಗ ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ ಹೆಜ್ಜೆಹೆಜ್ಜೆಗೂ ಹೃದಯವ ತುಳಿವ ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ ಬೇಗ ಬಾ . . . ನಮ್ಮಿರಮಿಂದಾವಮೃತವ ಪಡೆಯೆ, ಆರಾಡಿಪರೀ ಮಂತನು ಅರಿಯೆ. ಚಲಿಚಲಿಸುತ ಎದೆಯುಬ್ಬಿಸಿ ನೋವೆಬ್ಬ...

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದು...

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬ...

1...45678...10