ವಿನಾಯಕ ಕೃಷ್ಣ ಗೋಕಾಕ್

ಚಂದ್ರಗ್ರಹಣ

ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ […]

ಬೆಡಗಿ

ಸುಡು ನಿನ್ನ ಸಿಂಗರವ, ನಿನ್ನ ಸೊಗವ. ಬಿಡು ನಿನ್ನ ಬೆಡಗ ಹಾ- ಳಾಗಿಸಿತು ಜಗವ! ಆಳಾಗಿಸಿತು ನೂರು ದೇಹಗಳನು, ತೊಳಲಾಡಿಸಿತ್ತೆನಿತೊ ಗೇಹಗಳನು! ನಿನ್ನ ಮಖಮಲು ಮುಖವ ಬಣ್ಣಿಸಿದ […]

ಕೃಪಣರ ಬಾಳು

ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ ಬೇಡಿದೆನು ಮುತ್ತನೊಂದು. ‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ! ಅವು ನನ್ನ ಪ್ರಾಣಬಿಂದು!’ ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ. ಹಾತೊರೆದೆ ಹೂವಿಗೆಂದು, […]

ಬೇಡತಿ

ನರಿಯ ಮದುವೆಯ ಮಂಗ- ಲೋತ್ಸವದ ಸಮಯವೆನೆ ಹೂಬಿಸಿಲುಮಳೆಯಾಗ ಸುರಿಯುತಿತ್ತು. ‘ಇರುವೆ ನಿಬ್ಬೆರಗಾಗಿ’ ಎಂದು ಮುಗಿಲೆಂದಂತೆ ನೀರದದ ಕಪ್ಪುಗೆರೆ ಸರಿಯುತಿತ್ತು. ಮೊರಡಿಯೊಂದರ ಬಳಿಗೆ ಸಾಗಿಹಳು ಬೇಡತಿಯು. ಅವಳ ಬಣ್ಣವು […]

ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ ಎತ್ತ ಏನು ಕಾಣದಾಗೆ ಮಳೆಯ ಹನಿಯು ಮೊತ್ತವಾಗಿ ಬಂದು ಮೊಗವ ತಿವಿಯುತಿರಲು ಸತ್ತು ಬಿದ್ದ ಬಂಟನಂತೆ ಇಳೆಯು ಸುಮ್ಮನೊರಗುತಿರಲು ಕತ್ತನೆತ್ತಿ ಅತ್ತ ಇತ್ತ ನೋಡುತಿಹುದು […]

ಗಿಳಿವಿಂಡು

ಒಂದರಳೆ ಮರದಲ್ಲಿ ಸಂಜೆಯಾಗಿರುವಲ್ಲಿ ಒಂದೊಂದೆ ಮರಳುವವು ಸಾಲುಗೊಂಡು : ಒಂದೊಂದೆ ಮರಳುವವು ಗಿಳಿಯೆಲ್ಲ ತೆರಳುವವು ಗೂಡುಗೊಂಡಿಹ ಮರವನಿದಿರುಗೊಂಡು. ಸಂಧ್ಯೆಯಿಂದೀಚೆಗೆನೆ ಸ್ಮರನೆಚ್ಚ ಶರಗಳೆನೆ ತಾಗುತಿದೆ ಗಿಳಿಹಿಂಡು ಬಂದು ಮರಕೆ. […]

ಬಣ್ಣದ ಚಿಟ್ಟೆ

`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. […]

ನಮಸ್ತೇ!

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, […]

ಭೋಂಗಾನಾದ

ಕೋಳಿ ಕೂಗಿ ನಸುಕನೆಚ್ಚರಿಸುವ ಮುನ್ನ, ಹೊಂಗದಿರನೆದ್ದು ವಸುಧೆಯ ನೋಡಿ ನಗುವ ಮುನ್ನ, ಹಗಲ ಮುಗಿಲುಗನಸಿನಲಿ ಬೆಂಗದಿರ ಮಾಯವಾಗುವ ಮುನ್ನ, ನನ್ನ ಕಿಟಕಿಯ ಬಳಿ ರೆಂಬೆಯ ಮೇಲೆ ಕುಳಿತು […]